ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯು ನಡೆಯಿತು. ಈ ಚುನಾವಣೆಯಲ್ಲಿ ಮತಪತ್ರವನ್ನು ಉಪಯೋಗಿಸಿ ವಿದ್ಯಾರ್ಥಿಗಳು ಮತವನ್ನು ಚಲಾಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜೋಯಿಷ್ಟನ್ ಕ್ರಾಸ್ತ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಎಂ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ, ಕ್ರೀಡಾ ಸಂಘದ
ಕಾರ್ಯದರ್ಶಿಯಾಗಿ ಶ್ರೇಯಾ. ಆರ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ. ಜತೆ ಕಾರ್ಯದರ್ಶಿಯಾಗಿ ಶ್ರೇಯಾ. ಕೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಶ್ರೀವಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ, ಜತೆ ಕಾರ್ಯದರ್ಶಿಯಾಗಿ ಅಶಿಕ. ಬಿ ಎಂ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ , ಇಕೋಕ್ಲಬ್ನ

ಕಾರ್ಯದರ್ಶಿಯಾಗಿ ಧನ್ವಿ ಪಿ ಆರ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಜತೆ ಕಾರ್ಯದರ್ಶಿಯಾಗಿ ಆಶಿಶ್ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ, ರೆಡ್ ಕ್ರಾಸ್ ಕಾರ್ಯದರ್ಶಿಯಾಗಿ ಕಿಶನ್ ಬಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ಜತೆ ಕಾರ್ಯದರ್ಶಿಯಾಗಿ ನಿಧಿ ಶೆಟ್ಟಿ ಪ್ರಥಮ ಪಿಯುಸಿ ಕಲಾ ವಿಭಾಗ, ರೀಡರ್ಸ್ ಕ್ಲಬ್ ನ ಕಾರ್ಯದರ್ಶಿಯಾಗಿ ಹಿತಾಶ್ರೀ. ಕೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ,ಜತೆ ಕಾರ್ಯದರ್ಶಿಯಾಗಿ, ಹರ್ಷಿತ್ ಪ್ರಥಮ ಪಿಯುಸಿ ಕಲಾವಿಭಾಗ ಆಯ್ಕೆಯಾದರು. ಚುನಾವಣೆಯನ್ನು ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ .ಎನ್ ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರು,ಭೋದಕ ಮತ್ತು ಬೋಧಕೇತರ ವೃಂದದವರು ಚುನಾವಣೆಗೆ ಸಹಕಾರ ನೀಡಿದರು.