ಸುಳ್ಯ:ಆರ್ಥಿಕ ವ್ಯವಹಾರದ ಮೂಲಕ ಸುಳ್ಯದ ಜನತೆಯ ಆರ್ಥಿಕ ಜೀವನಾಡಿಯಾಗುರುವ ಸಂಸ್ಥೆ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸುಳ್ಯ ಸಿಎ ಬ್ಯಾಂಕ್). ಒಂದು ಶತಮಾನಗಳಿಗಿಂತಲೂ ಹೆಚ್ಚು ಸುದೀರ್ಘವಾದ ಆರ್ಥಿಕ ವ್ಯವಹಾರಗಳ ಜೊತೆಗೆ ಪಡಿತರ ವಿತರಣೆ, ರಸಗೊಬ್ಬರ ಮಾರಾಟ ಮಳಿಗೆ ಹೀಗೆ ಹಲವು ಸೇವೆಗಳನ್ನು
ಜನರಿಗೆ, ಕೃಷಿಕರಿಗೆ ನೀಡುವ ಮೂಲಕ ಜನಪ್ರಿಯವಾಗಿರುವರು ಸಂಸ್ಥೆ ಸುಳ್ಯ ಸಿಎ ಬ್ಯಾಂಕ್. ಇದೀಗ ಸಿಎ ಬ್ಯಾಂಕ್ನ ರಸಗೊಬ್ಬರ ಮಾರಾಟ ವಿಭಾಗದಲ್ಲಿ ರಬ್ಬರ್ ಪರಿಕರಗಳ ಮಾರಾಟವನ್ನು ಆರಂಭಿಸುವ ಮೂಲಕ ಕೃಷಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ಎಲ್ಲಾ ತರಹದ ಗುಣಮಟ್ಟದ ಪರಿಕರಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುವ ಮೂಲಜ ರಬ್ಬರ್ ಕೃಷಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.
ಒಂದೇ ಸೂರಿನಡಿಯಲ್ಲಿ ರಬ್ಬರ್ ಕೃಷಿಗೆ ಸಂಬಂಧಿಸಿದ ಎಲ್ಲಾ ಪರಿಕರಗಳು ಆಕರ್ಷಕ ದರದಲ್ಲಿ ಲಭ್ಯವಾಗಲಿದೆ. ರಬ್ಬರ್ ಕೃಷಿಕರಿಗೆ ಬಳಕೆಯಾಗುವ ಪರಿಕರಗಳಾದ ಫಾರ್ಮಿಕ್ ಆಸಿಡ್, ಗಮ್, ಕ್ಯಾನ್ಗಳು, ಕಪ್ಗಳು, ಟ್ಯಾಪಿಂಗ್ ಚೂರಿ, ಕಪ್ ಹ್ಯಾಂಗರ್, ಅಲ್ಯೂಮಿನಿಯಮ್ ಟ್ರೇ, ಪ್ಲಾಸ್ಟಿಕ್ಗಳು, ರೋಪ್, ರಬ್ಬರ್ ಕೋಟ್ ಇತ್ಯಾದಿ ಎಲ್ಲಾ ವಿಧದ ಪರಿಕರಗಳು ಇಲ್ಲಿ ದೊರೆಯುತ್ತವೆ.
ರಬ್ಬರ್ ಪರಕರಗಳ ಖರೀದಿಗೆ, ಎಲ್ಲಾ ತರಹದ ರಸಗೊಬ್ಬರಗಳಿಗಾಗಿ
ಸಿಎ ಬ್ಯಾಂಕಿನ ರಸಗೊಬ್ಬರ ಮಾರಾಟ ಮಳಿಗೆಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
9591967903
08257-230323