ಸುಳ್ಯ:ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲ ಮುಕ್ಕೂರು ಇವರ ವತಿಯಿಂದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ “ಮಳೆಗಾಲ ಮತ್ತು ಪರಿಸರ” ವಿಷಯದ ರೀಲ್ಸ್ ಸ್ಪರ್ಧೆ–2026 ಆಯೋಜಿಸಲಾಗಿದೆ.ಮಳೆಗಾಲದ ಸೌಂದರ್ಯ, ಪರಿಸರ ಸಂರಕ್ಷಣೆ, ನೀರಿನ ಮಹತ್ವ, ವೃಕ್ಷಾರೋಪಣ ಹಾಗೂ ಸ್ವಚ್ಛತೆ ಮತ್ತು
ಹಸಿರು ಜೀವನಶೈಲಿ ವಿಷಯಗಳ ಕುರಿತು 30 ರಿಂದ 60 ಸೆಕೆಂಡುಗಳ ಅವಧಿಯ ಕನ್ನಡ ಧ್ವನಿಯ ರೀಲ್ಸ್ಗಳನ್ನು ಸ್ಪರ್ಧಿಗಳು ಸಿದ್ಧಪಡಿಸಿ ಸಲ್ಲಿಸಬಹುದಾಗಿದೆ. ರೀಲ್ಸ್ ಅನ್ನು ಸ್ಪರ್ಧಿಯೇ ಚಿತ್ರೀಕರಿಸಿ ತಯಾರಿಸಿರಬೇಕು ಹಾಗೂ ಒಬ್ಬ ಸ್ಪರ್ಧಿ ಒಂದು ರೀಲ್ಸ್ ಮಾತ್ರ ಸಲ್ಲಿಸಲು ಅವಕಾಶವಿದೆ.ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ರೀಲ್ಸ್ಗಳನ್ನು ಜು. 10ರೊಳಗೆ ವಾಟ್ಸಾಪ್ ಸಂಖ್ಯೆ 9740189529ಕ್ಕೆ ಕಳುಹಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.













