ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ನ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಮತ್ತು ಬಿಜೆಪಿಯ ನಾರಾಯಣಸಾ ಭಾಂಡಗೆ ಗೆಲುವು ಸಾಧಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ
ಅಜಯ್ ಮಾಕನ್, ಜಿ.ಸಿ. ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್, ನಾರಾಯಣಸಾ ಭಾಂಡಗೆ
ಕಣಕ್ಕಿಳಿದಿದ್ದ ಜೆಡಿಎಸ್ನ ಡಿ. ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.223 ಶಾಸಕರ ಪೈಕಿ 222 ಶಾಸಕರು ಮತ ಚಲಾಯಿಸಿದ್ದರು. ಅಜಯ್ ಮಾಕನ್, ನಾಸೀರ್ ಹುಸೇನ್ ಮತ್ತು ನಾರಾಯಣ ಸಾ ಭಾಂಡಗೆ ತಲಾ 47 ಮತಗಳನ್ನು ಪಡೆದಿದ್ದಾರೆ. ಜಿ.ಸಿ. ಚಂದ್ರಶೇಖರ್ 45 ಮತ ಪಡೆದಿದ್ದಾರೆ.ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ.