ಸುಳ್ಯ: ಸುಳ್ಯ, ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಎಣ್ಮೂರು, ಕಡಬ, ಬೆಳ್ಳಾರೆ, ಕಾವಿನಮೂಲೆ, ಕಲ್ಮಡ್ಕ ಭಾಗದಲ್ಲಿ
ಉತ್ತಮ ಮಳೆ ಸುರಿದಿದೆ. ಗುಡುಗು, ಸಿಡಿಲು, ಗಾಳಿಯ ಅಬ್ಬರದೊಂದಿಗೆ ಮಳೆ ಸುರಿದಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇದ್ದು ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಹನಿ ಮಳೆಯಾಗುತಿದೆ.
ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆಯ ವೇಳೆ ಮಳೆಯಾಗುತಿದೆ. ಸುಳ್ಯ ನಗರದಲ್ಲಿ ಸಂಜೆ 5 ಗಂಟೆಯ ವೇಳೆಗೆ ಹನಿ ಮಳೆ ಆರಂಭ ಆಗಿದೆ.