ಸುಳ್ಯ: ಸುಳ್ಯ ನಗರದ ಬಾಳೆಮಕ್ಕಿ ಬಳಿ ಜೀಪು ಮತ್ತು ಟೆಂಪೋ ಚಾಲಕರಿಗೆ ನೆರಳು ನೀಡುತ್ತಿದ್ದ ಮರಗಳನ್ನು ತುಂಡರಿಸಿದವರ ಪತ್ತೆಗೆ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಜೀಪು ಮತ್ತು ಟೆಂಪೊ ಚಾಲಕರು ಮತ್ತು ಮಾಲಕರು ಇಂದು ಬೆಳಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಈ ಕೃತ್ಯ ನಡೆಸಿದವರ
ಪತ್ತೆಗಾಗಿ ಪ್ರಾರ್ಥನೆ ಸಲ್ಲಿಸಿದರು.ಬಾಳೆಮಕ್ಕಿ ಬಳಿ ಜೀಪು ಸ್ಟ್ಯಾಂಡ್ನಲ್ಲಿ ಇರುವ ಚಾಲಕರಿಗೆ, ಸಾರ್ವಜನಿಕರಿಗೆ, ಪರಿಸಕ್ಕೆ ನೆರಳಾಗಿದ್ದ ಎರಡು ಹೊಂಗೆ ಹಾಗೂ ಎರಡು ಬಾದಾಮಿ ಮರಗಳನ್ನು ಗರಗಸ ಬಳಸಿ ಅರ್ಧಕ್ಕಿಂತ ಹೆಚ್ಚು ಭಾಗ ತುಂಡರಿಸಿ ಅದು ಯಾರಿಗೂ ಗೊತ್ತಾಗದಂತೆ ಆ ಭಾಗಕ್ಕೆ ಬಟ್ಟೆ ಕಟ್ಟಲಾಗಿತ್ತು. ಗಾಳಿ ಮಳೆಗೆ ಮರಗಳು ಮುರಿದು ಬಿದ್ದಿದೆ.
ಈ ಮರಗಳನ್ನು ಈ ರೀತಿ ತುಂಡರಿಸಿದವರು ಪತ್ತೆಯಾಗಬೇಕು ಎಂದು ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.