ಕಲ್ಲಪಳ್ಳಿ:ಪರಪ್ಪ ಬ್ಲಾಕ್ ಪಂಚಾಯತ್ನ 2025-26 ಮಹಿಳೆಯರಿಗೆ ಸ್ವುದ್ಯೋಗ ನೀಡುವ “ಸಂಭ್ರಮ” ಯೋಜನೆಯಲ್ಲಿ ಮಂಜೂರಾದ ಪ್ರಕೃತಿ ಪೌಲ್ಟ್ರಿ ಫಾರ್ಮ್ನ ಉದ್ಘಾಟನೆಯನ್ನು ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ ನೆರವೇರಿಸಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು
ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ವಹಿಸಿದ್ದರು. ಬ್ಲಾಕ್ ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಜಹೀರ್ ಪಿ.ವಿ. ವರದಿ ವಾಚಿಸಿದರು.ಪರಪ್ಪ ಬ್ಲಾಕ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಕೃಷ್ಣ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಕುಮಾರಿ, ಪನತ್ತಡಿ ಸಿಡಿಎಸ್ ಅಧ್ಯಕ್ಷೆ ಚಂದ್ರಮ್ಮ, ಕಲ್ಲಪಳ್ಳಿ ಎಡಿಎಸ್ ನಳಿನಾಕ್ಷಿ ಶುಭ ಹಾರೈಸಿದರು.
ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಸ್ವಾಗತಿಸಿ. ಪ್ರಕೃತಿ ಪೌಲ್ಟ್ರಿ ಫಾರಂನ ಸೆಕ್ರೆಟರಿ ದಿವ್ಯ ಹೆಚ್ ಜಿ, ವಂದಿಸಿದರು.
ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ, ಮಹಿಳೆಯರ ನೇತೃತ್ವದಲ್ಲಿ ಕಲ್ಲಪ್ಪಳ್ಳಿಯ ಅರುಣುಗುಂಜ ದಲ್ಲಿ ಪ್ರಾರಂಭವಾಗಿರುವ ಬ್ಲಾಯಲರ್ ಕೋಳಿ ಸಾಕಾಣಿಕಾ ಘಟಕಕ್ಕೆ ಬ್ಲಾಕ್ ಪಂಚಾಯತ್ ಶಿಫಾರಸ್ಸಿನ ಮೇರೆಗೆ ಬ್ಯಾಂಕಿನಿಂದ 6 ಲಕ್ಷ ಸಾಲ ಮಂಜೂರು ಮಾಡಲಾಗಿದ್ದು ಇದಕ್ಕೆ 3,50,000 ಬ್ಲಾಕ್ ಪಂಚಾಯತಿನ ಧನಸಹಾಯ ಸಿಗಲಿದೆ, ಪ್ರಥಮ ಹಂತದಲ್ಲಿ 2,50,000 ಧನಸಾಯ ಸಿಕ್ಕಿದ್ದು ಉಳಿದ ಒಂದು ಲಕ್ಷ ರೂಪಾಯಿ ಎರಡನೇ ಹಂತದಲ್ಲಿ ಸಿಗಲಿದೆ. ಐದು ಜನ ಮಹಿಳೆಯರ ಗುಂಪುಗಳಾಗಿ ಮಾಡಿ, ಆಧುನಿಕ ರೀತಿಯಲ್ಲಿ “ಪ್ರಕೃತಿ ಪೌಲ್ಟ್ರಿ ಫಾರ್ಮ್” ಬಾಯ್ಲರ್ ಕೋಳಿ ಸಾಕಣೆ ಘಟಕವನ್ನು ಸ್ಥಾಪಿಸಲಾಗಿದೆ.














