ಐವರ್ನಾಡು:ತನಗೆ ಬರುವ ಪಿಂಚಣಿಯಿಂದ 5 ಸಾವಿರ ರೂವನ್ನು ಕಬಡ್ಡಿ ಪಂದ್ಯಾಟಕ್ಕೆ ದೇಣಿಗೆಯಾಗಿ ನೀಡಿ ಯುವಕರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಈ ಹಿರಿ ಜೀವ ತನ್ನ 96ನೇ ವಯಸ್ಸಿನಲ್ಲಿಯೂ ಕ್ರೀಡಾಂಗಣಕ್ಕೆ ಆಗಮಿಸಿ ಕಬಡ್ಡಿ ಪಂದ್ಯಾಟವನ್ನು ವೀಕ್ಷಿಸಿದರು. ಕೆ.ಎಲ್.ಪಾರ್ವತಿ ಅವರ ಕ್ರೀಡಾ ಪ್ರೀತಿ ಮತ್ತು ಕ್ರೀಡಾಸ್ಪೂರ್ತಿಗೆ ತುಂಬಿದ ಕ್ರೀಡಾಂಗಣದಲ್ಲಿ ನೆರೆದ ಕ್ರೀಡಾಭಿಮಾನಿಗಳು
ಕರತಾಡನದೊಂದಿಗೆ ಅಭಿನಂದನೆ ಸಲ್ಲಿಸಿದರು. ಆಯೋಜಕರು ಪಾರ್ವತಿ ಅಮ್ಮನವರನ್ನು ಸನ್ಮಾನಿಸಿ ಅಭಿನಂದಿಸಿದರು. ಗೆಳೆಯರ ಬಳಗ ಐವರ್ನಾಡು ನೇತೃತ್ವದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಐವರ್ನಾಡಿನಲ್ಲಿ ನಡೆದ ಕಬಡ್ಡಿ ಪಂದ್ಯಾಟಕ್ಕೆ ಗೆಳೆಯರ ಬಳಗ ಐವರ್ನಾಡು ಇದರ ಸಂಚಾಲಕರಾದ ವಾಸುದೇವ ಬೊಳುಬೈಲು ಅವರ ತಾಯಿ ಪಾರ್ವತಿ ಕೆ.ಎಲ್ ಅವರು ತಮಗೆ ಬರುವ ಪಿಂಚಣಿಯಿಂದ 5 ಸಾವಿರ ರೂವನ್ನು ದೇಣಿಗೆಯಾಗಿ ನೀಡಿದ್ದರು. ಅಲ್ಲದೆ ಭಾನುವಾರ ಅವರು ಕ್ರೀಡಾಂಗಣಕ್ಕೆ ಆಗಮಿಸಿ ಕಬಡ್ಡಿ ಪಂದ್ಯಾಟವನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಐವರ್ನಾಡು ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸಂತೋಷ್ ಜಾಕೆ, ದೊಡ್ಡಣ್ಣ ಬರೆಮೇಲು, ಜ್ಯೋತ್ಸ್ನಾ ಪಾಲೆಪ್ಪಾಡಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಅಶ್ವಿನಿ ಕೊಪ್ಪತ್ತಡ್ಕ, ಗೆಳೆಯರ ಬಳಗದ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ
ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟದ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.