ಪಂಜ:ಜೇಸಿಐ ಪಂಜ ಪಂಚಶ್ರೀ ಜೇಸಿ ಸಪ್ತಾಹ-2025 ಅ.26 ರಿಂದ ನ.1 ತನಕ ನಡೆಯಲಿದೆ .ಅ.26 ರಂದು ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.ಪ್ರಾಂತ್ಯ ‘ಎಫ್’ ವಲಯ 15, ವಲಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ ಉದ್ಘಾಟಿಸಿದರು.ಜೇಸಿಐ ಪಂಜ ಪಂಚಶ್ರೀ ಜೇಸಿಯ
ಅಧ್ಯಕ್ಷ ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಮಾಧವ ಗೌಡ ಜಾಕೆ ಕೆಸರು ಗದ್ದೆ ಕ್ರೀಡಾ ಉದ್ಘಾಟಿಸಿದರು.
ಪ್ರಾಂತ್ಯ ‘ಎಫ್’ ,ಜೇಸಿ ವಲಯ 15 ರ ವಲಯಾಧಿಕಾರಿ
ಲೋಕೇಶ್ ಆಕ್ರಿಕಟ್ಟೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಜೀವನ್ ಮಲ್ಕಜೆ, ಸಪ್ತಾಹ ನಿರ್ದೇಶಕ ದೇವಿಪ್ರಸಾದ್ ಚಿಕ್ಮುಳಿ, ಕಾರ್ಯದರ್ಶಿ ಅಶ್ವಥ್ ಬಾಬ್ಲುಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು. ದೇವಿಪ್ರಸಾದ್ ಜಾಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ಗಗನ್ ಕಿನ್ನಿಕುಮೇರಿ ಜೇಸಿ ವಾಣಿ ವಾಚಿಸಿದರು.ಜೀವನ್ ಶೆಟ್ಟಿಗದ್ದೆ, ಕೌಶಿಕ್ ಕುಳ, ಪ್ರವೀಣ್ ಕುಂಜತ್ತಾಡಿ ಅತಿಥಿಗಳ ಪರಿಚಯಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.ಕೆಸರುಗದ್ದೆ ಹಗ್ಗ ಜಗ್ಗಾಟ,ವಾಲಿಬಾಲ್ ಪಂದ್ಯಾಟ, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.















