ಪಂಜ:ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತುರ್ತು ಸಂದರ್ಭದಲ್ಲಿ ಜೀವ ರಕ್ಷಕ ಅಂಬ್ಯುಲೆನ್ಸ್ ನ ಸಂಪರ್ಕ ಸಂಖ್ಯೆಯ ಪ್ರಚಾರಪಡಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಪಂಚಶ್ರೀ ಜೀವ ರಕ್ಷಕ ಅಂಬ್ಯುಲೆನ್ಸ್ ನ ಭಿತ್ತಿಪತ್ರ ಅಳವಡಿಕೆ ಮಾಡಲಾಯಿತು.
ಪಂಜ ಶ್ರೀ
ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಚಾಲನೆ ನೀಡಿದರು.ನಂತರ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಪಂಜ ದೇವಸ್ಥಾನ, ಬೀದಿಗುಡ್ಡೆ, ಅಡ್ಡಬೈಲು, ಬಳ್ಪ, ಪಲ್ಲೋಡಿ, ಪಂಜ, ಪಂಬೆತ್ತಾಡಿ, ಕಲ್ಮಡ್ಕ, ಕರಿಕ್ಕಳ, ಪಡ್ಪಿನಂಗಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಿತ್ತಿಪತ್ರ ಅಳವಡಿಕೆ ಮಾಡಲಾಯಿತು.