ಪಂಬೆತಾಡಿ:ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿಯ ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಪ್ರಸಾದ್ ಭೀಮಗುಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಕುಮಾರ್ ಕರಿಕ್ಕಳ ಹಾಗೂ
ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಪ್ರಸಾದ್ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು. ಇತ್ತೀಚೆಗೆ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿ 8 ಸ್ಥಾನಗಳಲ್ಲಿ , ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಜಯ ಗಳಿಸಿತು.
ನಿರ್ದೇಶಕರಾದ ಜಾಕೆ ಮಾಧವ ಗೌಡ, ಸಂತೋಷ್ ಜಾಕೆ, ದಿಲೀಪ್ ಬಾಬ್ಲುಬೆಟ್ಟು,ವೆಂಕಪ್ಪ ಎನ್ ಪಿ ಬೆಳಗಜೆ, ಲವಕುಮಾರ್, ಧರ್ಮಣ ನಾಯ್ಕ ಗರಡಿ, ಗುರುವ ಕಲ್ಚಾರ್, ರಂಜಿನಿ ಪಂಜಬೀಡು, ಧನಂಜಯ ಮಡಪ್ಪಾಡಿ ಮೂಕಾಂಬಿಕಾ ಉಪಸ್ಥಿತರಿದ್ದರು.