ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಸುಳ್ಯದ ಅಮೃತಭವನ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ 2024ನೇ ಸಾಲಿನ ಅಧ್ಯಕ್ಷ ಗುರುಪ್ರಸಾದ್ ನಾಯಕ್ ವಹಿಸಿ, 2024ರ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.ವೇದಿಕೆಯಲ್ಲಿ ಜೇಸಿಐ ಭಾರತದ ವಲಯ15ರ ವಲಯ ಅಧ್ಯಕ್ಷ ಅಭಿಲಾಷ್ ಬಿ.ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅತಿಥಿಗಳಾಗಿ
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಜೇಸಿಐ ವಲಯ 15ರ ಉಪಾಧ್ಯಕ್ಷ ಸುಹಾಸ್ ಮರಿಕೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ಶುಭಹಾರೈಸಿದರು.2025ನೇ ಸಾಲಿನ ನೂತನ ಅಧ್ಯಕ್ಷ. ಸುರೇಶ್ ಕಾಮತ್ ಜಯನಗರ ಮಾತನಾಡಿದರು.ಈ ಸಂದರ್ಭದಲ್ಲಿ ಜೆಸಿಐ ಪ್ರಮುಖರಾ್ ಅಶೋಕ್ ಚೂಂತಾರು, ನವೀನ್ ಕುಮಾರ್ ಉಪಸ್ಥಿತರಿದ್ದರು.
ವಿನೋದ್ ಮೂಡಗದ್ದೆ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆ ಮಾಡಲಾಯಿತು.2024ರ ಜೊತೆ ಕಾರ್ಯದರ್ಶಿ ಯಾದ ಸುಭಾಷಿಣಿ ಬೊಳುಗಲ್ಲು, ನಿಕಟಪೂರ್ವ ಅಧ್ಯಕ್ಷ ನವೀನ್ ಕುಮಾರ್, ನೂತನ ಕಾರ್ಯದರ್ಶಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿ ಗಳನ್ನು ವೇದಿಕೆಗೆ ಆಹ್ವಾನಿಸಿ, ವಂದಿಸಿದರು.ತನ್ವಿ, ಶಶ್ಮಿ ಭಟ್ ಅಜ್ಜಾವರ, ರಮ್ಯ ರಂಜಿತ್ ಕುಕ್ಕೆಟ್ಟಿ, ಧನುಷ್ ಕುಕ್ಕೆಟ್ಟಿ, ಪ್ರಸನ್ನ ಎಂ.ಆರ್., ರವಿಕುಮಾರ್ ಅಕ್ಕೋಜಿಪಾಲ್ ಸಹಕರಿಸಿದರು.