ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಭೆ ಸಂಘದ ಕಚೇರಿಯಲ್ಲಿ ಜರಗಿತು.ಸಂಸ್ಥೆಯ ಅಧ್ಯಕ್ಷ ಎಸ್.ಸಂಶುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಹೊಸದಾಗಿ ಸದಸ್ಯತ್ವ ಪಡೆದವರನ್ನು ಸಭೆಗೆ ಪರಿಚಯಿಸಿ ಗೌರವಾರ್ಪಣೆ ಮಾಡಲಾಯಿತು. ಸಂಘದ ನೂತನ ಸದಸ್ಯರಾಗಿ
ರಾಮದಾಸ್ ಗೌಡ, ಮಾಧವ ಕಲ್ತಡ್ಕ ಯೇನೆಕಲ್ಲು, ವಕೀಲರಾದ ಮೂಸ ಕುಂಞಿ ಪೈಂಬಚ್ಚಾಲ್, ರಕ್ಷಿತ್ ದೊಡ್ಡಡ್ಕ ಅವರು ಸದಸ್ಯತ್ವ ಪಡೆದರು.ವಿವಿಧ ಉಪ ಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷ ಎಸ್.ಸಂಶುದ್ದೀನ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಪಿ. ಎಂ.ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಖಜಾಂಚಿ ಚಂದ್ರಶೇಖರ ನಂಜೆ ವಂದಿಸಿದರು.









