ಸುಳ್ಯ:ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಷನ್ನ ವಾರ್ಷಿಕ ಮಹಾಸಭೆ ಎಂ ಐ ಮದರಸ ಸಭಾಂಗಣದಲ್ಲಿ ನಡೆಯಿತು.ಗಾಂಧಿನಗರ ಜುಮ್ಮಾ ಮಸೀದಿ ಮುದರಿಸ್ ಮುಬಶ್ಶೀರ್ ಅಹ್ಸನಿ ಕೊಂಡಂಗೇರಿ ಸಭೆಯನ್ನು ಉದ್ಘಾಟಿಸಿದರು.ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ
ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಅಧ್ಯಕ್ಷರಾಗಿ ಕೆ.ಬಿ ಇಬ್ರಾಹಿಂ,ಉಪಾಧ್ಯಕ್ಷರಾಗಿ ಹನೀಫ್ ಬುಶ್ರಾ, ಶಾಫಿ ಕುತ್ತಮೊಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಬಿ.ಎಂ,ಜೊತೆ ಕಾರ್ಯದರ್ಶಿಗಳಾಗಿ ಸಂಶುದ್ದೀನ್ ಕೆ.ಎಂ,ಬಶೀರ್ ಸಪ್ನಾ,ಕೋಶಾಧಿಕಾರಿಯಾಗಿ ಕೆ.ಎಚ್.ಅಬ್ದುಲ್ ಶುಕೂರ್ ಆಯ್ಕೆಯಾದರು. ನಿರ್ದೇಶಕರಾಗಿ

ಹಾಜಿ ಮುಸ್ತಫಾ ಕೆ.ಎಂ, ಎಸ್ ಅಬ್ದುಲಾ ಕಟ್ಟೆಕ್ಕಾರ್, ಎನ್. ಎ.ಜುನೈದ್, ಅಬ್ದುಲ್ ಹಮೀದ್ ಜನತಾ, ಆದಂ ಹಾಜಿ ಕಮ್ಮಾಡಿ,ಅಬ್ದುಲ್ ಲತೀಫ್ ಎಂ ಕೆ,ಹಾಜಿ ಅಬ್ದುಲ್ ಗಫಾರ್,ಹಾಜಿ ಯಾಕುಬ್ ,ಎಸ್ ಪಿ ಅಬೂಬಕ್ಕರ್, ಶಾಹಿದ್ ಪಾರೆ,ಶರೀಫ್ ಜಟ್ಟಿಪಳ್ಳ, ಸಿರಾಜುದ್ದೀನ್ ಪ್ಯಾನ್ಸಿ,ಮಜೀದ್ ಕೆ ಬಿ ಅವರನ್ನು ಆಯ್ಕೆಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಹಾಜಿ ಅಶ್ರಫ್ ಖಾಮಿಲ್ ಸಖಾಫಿ, ಹಾಜಿ ಕೆ.ಎಂ ಮಹಮ್ಮದ್ ಕೆಎಂಎಸ್,ಹಾಜಿ ಕೆ ಬಿ ಮಹಮ್ಮದ್, ಹಾಜಿ ಐ ಇಸ್ಮಾಯಿಲ್ ಹಾಜಿ ಅಬ್ದುಲ್ ಮಜೀದ್ ಜನತಾ ಅವರನ್ನು ಆಯ್ಕೆ ಮಾಡಲಾಯುತು. ಅನ್ಸಾರ್ ವ್ಯವಸ್ಥಾಪಕ ಮನೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.









