ಸುಳ್ಯ:ನಗರ ವ್ಯಾಪ್ತಿಯಲ್ಲಿ 1996 ನಂತರ ಮಂಜೂರಾದ ಎನ್ಸಿಆರ್ ದರ್ಖಾಸ್ ಕಡತಗಳನ್ನು 1ರಿಂದ 5 ನಮೂನೆ ಮಾಡಿ ಪ್ಲಾಟಿಂಗ್ ಮಾಡಿಸಲು ಆದೇಶ ನೀಡುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಅವರಿಗೆ
ಮನವಿ ಸಲ್ಲಿಸಿದ್ದಾರೆ.ಕರ್ನಾಟಕ ಸರ್ಕಾರದ ಮಹತ್ವಾಕಾoಕ್ಷಿ ಯೋಜನೆಯಾದ ಅಕ್ರಮ ಸಕ್ರಮ ದರ್ಕಾಸ್ ಫೈಲ್ಗಳ ಪ್ಲಾಟಿಂಗ್ ಮಾಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿರುವುದು ಉತ್ತಮ ಕಾರ್ಯ ಆದರೆ ನಗರ ವ್ಯಾಪ್ತಿಯಲ್ಲಿ 1996ರ ಮುಂಚಿತವಾಗಿ ಮಂಜೂರಾದ ಕಡತಗಳಿಗೆ ಮಾತ್ರ ಸೀಮಿತ ಮಾಡಿರುವುದರಿಂದ ತುಂಬಾ ತೊಂದರೆ ಯಾಗಿರುತ್ತದೆ ಇದನ್ನು ಪರಿಹರಿಸಬೇಕು ಎಂದು ಮನವಿ ಸಲ್ಲಿಸಲಾಯಿತು ಎಂದು ಕೆ.ಎಂ.ಮುಸ್ತಫ ತಿಳಿಸಿದ್ದಾರೆ.