ಬೆಂಗಳೂರು:ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ.ಎಚ್ ಮುನಿಯಪ್ಪ ಅವರನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳಿಗೆ 10ಕೋಟಿ ರೂ ವಿಶೇಷ ಅನುದಾನವನ್ನು ಒದಗಿಸುವಂತೆ ಮನವಿ ಸಲ್ಲಿಸಿದರು.ಸುಳ್ಯದ ಬಹು ವರ್ಷಗಳ ಬೇಡಿಕಡಯಾದ
ಅಂಬೇಡ್ಕರ್ ಭವನದ ಅಂದಾಜು ಪಟ್ಟಿಯು ಸರಕಾರಕ್ಕೆ ಸಲ್ಲಿಕೆಯಾಗಿ 2 ತಿಂಗಳಾಗಿದ್ದು ಇನ್ನು ಅನುಮೊದನೆಯಾಗಿಲ್ಲ ಅದನ್ನು ಶೀಘ್ರವೇ ಅದನ್ನು ಅನುಮೊದನೆಗೊಳಿಸಿ ಅಂಬೇಡ್ಕರ್ ಭವನದ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ತಿಳಿಸಿದರು, ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ವಂದಿಸಿದ ಸಚಿವರು ಅಧಿವೇಶನ ಮುಗಿದ ಬಳಿಕ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.







