ಸುಳ್ಯ: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.19 ರಂದು ಸುಳ್ಯ ಸಿ ಎ ಬ್ಯಾಂಕ್ ಹಾಲ್ನಲ್ಲಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಐ.ಕೆ ಎಲಿಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಪ್ರಾಸ್ತವಿಕವಾಗಿ ಮಾತನಾಡಿದ ಅಧ್ಯಕ್ಷ ಇಕ್ಬಾಲ್ ರವರು ಸಂಸ್ಥೆಯು 2025 26ನೇ ಸಾಲಿನಲ್ಲಿ
80 ಕೋಟಿ ರೂಪಾಯಿಗಳ ವ್ಯವಹಾರ ಮಾಡಿರುವುದು ಸಂತಸ ತಂದಿದೆ. ಈ ಯಶಸ್ವಿಗೆ ನಮ್ಮ ಸಂಘದ ಎಲ್ಲಾ ಸದಸ್ಯರಗಳ ಸಹಕಾರ ಪೂರಕವಾಗಿ ಲಭಿಸಿದೆ ಎಂದು ಹೇಳಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದ ಫಾತಿಮತ್ ಸಹಲಾ ಪೈಚಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಸಭಾ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಲೆಕ್ಕಪತ್ರ ಹಾಗು ಕಾರ್ಯ ಕಲಾಪ ನಿರ್ವಹಿಸಿದರು.ಆಡಳಿತ ಮಂಡಳಿಯ

ಉಪಾಧ್ಯಕ್ಷ ಹಸೈನಾರ್ ಎ ಕೆ ಕಲ್ಲುಗುಂಡಿ, ನಿರ್ದೇಶಕರಾದ ಬಾಪು ಸಾಹೇಬ್ ಎಸ್ಎಂ,ಹಾಜಿ ಮೊಹಿದೀನ್ ಫ್ಯಾನ್ಸಿ, ಆಮಿನ ಎಸ್ ಜಯನಗರ, ಮಹಮ್ಮದ್ ಹನೀಫ್ ಎಸ್ ಕೆ, ಜಾರ್ಜ್ ಡಿಸೋಜಾ ಕನಿಕರಪಳ್ಳ,ಅಬ್ದುಲ್ ರೆಹಮಾನ್ ಮೇನಾಲ, ಇಬ್ರಾಹಿಂ ಕತ್ತರ್ ಕೆ ಬಿ, ರಫೀಕ್ ಐವತೊಕ್ಲು, ಮಹಮ್ಮದ್ ಅನ್ಸಾರ್ ಬೆಳ್ಳಾರೆ,ಸಾಜಿದ ಜಿ ಎ ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಕಾರ್ಯ ಯೋಜನೆಗಳ ಚರ್ಚೆಗಳು ನಡೆದು ಮುಂದಿನ ವರ್ಷದ ಸಂಘದ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆ ಪಡೆಯಲಾಯಿತು. ಸಂಘದ ಸದಸ್ಯರುಗಳಿಗೆ ಶೇಕಡ 5.5ರಂತೆ ಡಿವಿಡೆಂಟ್ ನೀಡುವ ಬಗ್ಗೆ ಅಧ್ಯಕ್ಷರು ಸಭೆಗೆ ತಿಳಿಸಿದರು. ಸದಸ್ಯರು ಡಿವಿಡೆಂಟ್ ಅನ್ನು ಕಟ್ಟಡ ನಿಧಿಗೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದರು.
ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಸ್ವಾಗತಿಸಿ ಉಪಾಧ್ಯಕ್ಷ ಹಸೈನಾರ್ ಎ ಕೆ ವಂದಿಸಿದರು.ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.








