ಸುಳ್ಯ: ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಕೆ .ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೆಲ್ಲಿ ಉಚಿತ ವೈದ್ಯಕೀಯ ಶಿಬಿರ ಕುಕ್ಕುಜಡ್ಕ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಅಕಾಡೆಮಿಕ್ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಶಿಬಿರವನ್ನು ಉದ್ಘಾಟಿಸಿದರು.
ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಸುಳ್ಯ ರಾಜ್ಯ ಕಾರ್ಮಿಕ ನಿಗಮದ ವೈದ್ಯ ಡಾ.ಎಂ.ಬಿ. ಪಾರೆ, ಚೊಕ್ಕಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಗೌಡ ಕರ್ಮಜೆ, ದೊಡ್ಡತೋಟ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೃಷ್ಣಪ್ಪ ಎಂ.,ಯುವಜನ ಸಂಯುಕ್ತ ಮಂಡಳಿಯ ಪೂರ್ವಧ್ಯಕ್ಷ ಅನೀಲ್ ಪೂಜಾರಿಮನೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ದಯಾನಂದ ಪತ್ತುಕುಂಜ ,ಶ್ರೀರಾಮ ಭಜನಾ ಮಂದಿರ ದೊಡ್ಡತೋಟದ ಅಧ್ಯಕ್ಷರಾದ ಮಹೇಶ್ ಮೇರ್ಕಜೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಚೊಕ್ಕಾಡಿ ಪ್ರಾ. ಕೃ. ಪ.ಸಂಘ ನಿ. ಕುಕ್ಕುಜಡ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ಆಲೆಟ್ಟಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ರೇವತಿ ಸಂಜಿವ ಗೌಡ ಮದುವೆಗದ್ದೆ , ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೊಹಿನಿ ಹೆಚ್ ಪದವು , ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲತ್ತಡ್ಕ ,ಪ್ರಗತಿಪರ ಕೃಷಿಕ ಸುಪ್ರೀತ್ ಮೊಂಟಡ್ಕ, ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ವಿ. ಜಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಗೀತಾ ದೊಪ್ಪ, ಡಾ. ನಿತೀನ್ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲು, ವೈದ್ಯಕೀಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಶಿಬಿರದಲ್ಲಿ 100 ಜನರಿಗೆ ಉಚಿತವಾಗಿ ಕನ್ನಡ್ಕ ನಿಡಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ ನನ್ನ ಗ್ರಾಮ ನನ್ನ ಆರೋಗ್ಯ ಕುರಿತು ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರದೀಪ್ ಬೊಳ್ಳೂರು ಸ್ವಾಗತಿಸಿ ,ಜಯಪ್ರಸಾದ್ ಸಂಕೇಶ ವಂದಿಸಿದರು, ಶಶಿಕಾಂತ್ ಮಿತ್ತೂರು ನಿರೂಪಿಸಿದರು.