ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಗ್ರಾಮದ ಅರಿವು ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಮಾವಂಜಿ ಹಾಗೂ ಕಾರ್ಯದರ್ಶಿಗಳಾಗಿ ಮುರಳೀಧರ ರೈ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ
ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಶಶಿಧರ ಮಾವಜಿ, ಕೋಶಾಧಿಕಾರಿಯಾಗಿ ಭಾರತಿ ಉಗ್ರಾಣಿಮನೆ ಆಯ್ಕೆಯಾದರು. ಸಂಘದ ನಿರ್ದೇಶಕರುಗಳಾಗಿ ಉಮೇಶ್ ಮೇಲ್ಮನೆ, ಮುರಳೀಧರ ಉಗ್ರಾಣಿಮನೆ, ಭವ್ಯ ಉಗ್ರಾಣಿಮನೆ, ದಿನಕರ ಪಡ್ಪು, ಸವಿತಾ ಯದುಗಿರಿ, ಭವಾನಿಶಂಕರ್ ಕಲ್ಲಡ್ಕ, ಸರಸ್ವತಿ ಕಣೆಮರಡ್ಕ, ತಿರುಮಲೇಶ್ವರಿ ಪಾತಿಕಲ್ಲು ಹಾಗೂ ಯಶೋಧಾ ಪಂಜಿಕಲ್ಲು ಆಯ್ಕೆಯಾದರು.
ರಬ್ಬರ್ ಬೋರ್ಡ್ ನ ತರಬೇತುದಾರ ಹಾಗೂ ಮಾಹಿತಿದಾರ ಸತ್ಯಶಾಂತಿ ತ್ಯಾಗಮೂರ್ತಿ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಅರಿವು ಕೇಂದ್ರದ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.















