ಅಜ್ಜಾವರ:ಶ್ರೀ ರಕ್ಷಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ ಇವುಗಳ ಜಂಟಿ ಸಹಯೋಗದೊಂದಿಗೆ ಅಜ್ಜಾವರ ಪಂಚಾಯತ್ ಸಭಾಂಗಣದಲ್ಲಿ ಮಲ್ಲಿಗೆ ಕೃಷಿ ತರಬೇತಿ ನಡೆಯಿತು. ಕಾರ್ಯಕ್ರಮವನ್ನು ರೇವತಿ ದೊಡ್ಡೇರಿಯವರ ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು. ವೇದಿಕೆಯಲ್ಲಿ
ಶ್ರೀರಕ್ಷ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಮತಾ, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್, ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್, ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕರಾದ ಕೌಶಲ್ಯ, ರೂಪ, ಪ್ರೌಢ ಶಾಲೆ ಅಜ್ಜಾವರ ಶಾಲೆಯ ಪ್ರಭಾರ ಶಿಕ್ಷಕಿ ವಿದ್ಯಾಶಂಕರಿ, ಉಪಸ್ಥಿತರಿದ್ದರು.ಸುಶ್ಮಿತಾ ಗಣೇಶ್ ಉಜಿರೆ ಇವರು ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಗ್ರಾಮದ

ಐವತ್ತು ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಯುವತಿ ಮಂಡಲ,ಯುವಕ ಮಂಡಲ ಪದಾಧಿಕಾರಿಗಳು, ಸದಸ್ಯರು, ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಇಕೋ ಕ್ಲಬ್ ವಿದ್ಯಾರ್ಥಿಗಳು, ಅಜ್ಜಾವರ ಕೃಷಿ ಸಖಿ ಪೂರ್ಣಿಮಾ, ಸಂಪಾಜೆ ಗ್ರಾಮದ ಕೃಷಿ ಸಖಿ ನಿಶಾ,ಮಂಡೆಕೋಲು ಎಂಬಿಕೆ ವನಿತಾ,ಪಶು ಸಖಿ ಪುಷ್ಪಲತಾ, ಎಲ್ಸಿಆರ್ಪಿ ವಾಣಿ,ಶಿಕ್ಷಕರಾದ ಚಂದ್ರಶೇಖರ್ ಭಟ್, ಜಯಲಕ್ಷ್ಮೀ ರಾವ್, ವಿಶಾಲಾಕ್ಷಿ ಕಲ್ತಡ್ಕ, ವಿಶಾಲ ಕರ್ಲಪ್ಪಾಡಿ ಹಾಜರಿದ್ದರು. ಎಲ್ಸಿಆರ್ಪಿ ಹರಿಣಾಕ್ಷಿ ಇವರು ಧನ್ಯವಾದ ಮಾಡಿದರು. ಎಂಬಿಕೆ ಜಯಶ್ರೀ ಬೇಲ್ಯ ಸ್ವಾಗತಿಸಿದರು.