ಸುಳ್ಯ: ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ನ ಆಡಳಿತ ಮಂಡಳಿಗೆ ಜ.12ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಕೊನೆಗೊಂಡಾಗ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ 14 ವಲಯಗಳಿಂದ ಒಟ್ಟು 23 ನಾಮಪತ್ರ ಕಲ್ಪಿಸಲಾಗಿದೆ. ಮುರುಳ್ಯ ವಲಯದಿಂದ ಭಾಗೀರಥಿ ಮುರುಳ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯ ವಲಯದಿಂದ
ಸೋಮನಾಥ ಪೂಜಾರಿ, ಜ್ಞಾನೇಶ್ವರ ಶೇಟ್,ಜಾಲ್ಸೂರು ವಲಯದಿಂದ ಜಯರಾಮ ರೈ ಜಾಲ್ಸೂರು, ಸುರೇಶ್, ಆಲೆಟ್ಟಿ ವಲಯದಿಂದ ವಿಜಯ ಕರ್ಲಪ್ಪಾಡಿ, ಧರ್ಮಪಾಲ ಕೊಯಿಂಗಾಜೆ,ನೆಲ್ಲೂರು ಕೆಮ್ರಾಜೆ ವಲಯದಿಂದ ಮಹಾವೀರ ಜೈನ್, ದೇವಿಪ್ರಸಾದ್ ಸುಳ್ಳಿ,ಗುತ್ತಿಗಾರು ವಲಯದಿಂದ ಕಾವೇರಿ, ಬಾಲಕೃಷ್ಣ,ಕೊಲ್ಲಮೊಗ್ರ ವಲಯದಿಂದ ಸವಿತ, ದೇವಚಳ್ಳ ವಲಯದಿಂದ ರಮೇಶ್ ಪಡ್ಪು, ಸುಬ್ರಹ್ಮಣ್ಯ ವಲಯದಿಂದ ಅಚ್ಚುತ, ಐವರ್ನಾಡು ವಲಯದಿಂದ ಗಣಪಯ್ಯ ವಾಲ್ತಾಜೆ, ಮಂಜುನಾಥ್,
ಬೆಳ್ಳಾರೆ ವಲಯದಿಂದ ವಿಶಾಲಾಕ್ಷಿ, ಕಳಂಜ ವಲಯದಿಂದ ಈಶ್ವರಚಂದ್ರ, ಪಂಜ ವಲಯದಿಂದ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಸಿದ್ದಾರೆ. ಸಾಲಗಾರರಲ್ಲದ ವಲಯದಿಂದ ಅವಿನಾಶ್ ಕುರುಂಜಿ, ಶೈಲೇಶ್ ಅಂಬೆಕಲ್ಲು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ನಾಮಪತ್ರಗಳ ಪರಿಶೀಲನೆ ಜ.5 ರಂದು ನಡೆಯಲಿದೆ. ಜ.6ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಜ.12ರಂದು ಚುನಾವಣೆ ನಡೆಯಲಿದೆ.