ಸುಳ್ಯ: ಸುಳ್ಯದಿಂದ ಕೋಲ್ಚಾರ್ ತನಕ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಗಡಿ ಪ್ರದೇಶವಾದ ಕನ್ನಾಡಿತೋಡ್ ತನಕ ವಿಸ್ತರಣೆಗೊಂಡಿದೆ. ಪ್ರಸ್ತುತ ಸುಳ್ಯದಿಂದ ಕೊಲ್ಚಾರಿಗೆ ಸುಳ್ಯ ಘಟಕದಿಂದ ಪ್ರಯಾಣಿಸುವ ಬಸ್ ಜು.25ರಿಂದ ಕೇರಳ ಗಡಿ ಕನ್ನಾಡಿತೋಡ್ವರೆಗೆ ಪ್ರಯಾಣ ಆರಂಭಿಸಿದೆ. ಸುಳ್ಯದಿಂದ
ಬೆಳಗ್ಗೆ 7ಗಂಟೆಗೆ ಹೊರಡುವ ಬಸ್ 8 ಗಂಟೆಗೆ ಕನ್ನಾಡಿತೋಡ್ನಿಂದ ಸುಳ್ಯಕ್ಕೆ ಹೊರಡಲಿದೆ. ಮಧ್ಯಾಹ್ನ 1:30ಕ್ಕೆ ಸುಳ್ಯದಿಂದ ಹೊರಟು 2 ಗಂಟೆಗೆ ಕನ್ನಾಡಿತೋಡಿನಿಂದ ಹಾಗೂ ಸಂಜೆ 04:45 ಗಂಟೆಗೆ ಸುಳ್ಯದಿಂದ ಹೊರಟು 5.30ಕ್ಕೆ ಕನ್ನಾಡಿತೋಡಿನಿಂದ ಸುಳ್ಯಕ್ಕೆ ಹೊರಡಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ಗೆ ಕನ್ನಾಡಿತೋಡಿನಲ್ಲಿ ಸಾರ್ವಜನಿಕರು ಸ್ವಾಗತ ಕೋರಿದ್ದಾರೆ.