ಅರಂತೋಡು:ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿ ಆಡಳಿತದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಊರ ಪರವೂರ ವಿದ್ಯಾಭಿಮಾನಿಗಳ ಉದಾರ ಕೊಡುಗೆ ಹಾಗೂ ಎಂ. ಎಸ್. ಸುಬ್ರಹ್ಮಣ್ಯ ಮದುವೆಗದ್ದೆಯವರ ಪ್ರಧಾನ ಕೊಡುಗೆಯೊಂದಿಗೆ ನಿರ್ಮಾಣಗೊಂಡ ಐಶ್ವರ್ಯ ಮದುವೆಗದ್ದೆ ಸಭಾಭವನದ ಉದ್ಘಾಟನಾ ಸಮಾರಂಭ ಮತ್ತು
ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ.24ರಂದು ನಡೆಯಲಿದೆ.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಶಾಸಕಿ ಭಾಗೀರಥಿ ಮುರುಳ್ಯ ಜ್ಯೋತಿ ಬೆಳಗಿಸುವರು.ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸುವರು.ನಿವೃತ್ತ ಮಾನವ ಸಂಪನ್ಮೂಲ ಅಧಿಕಾರಿ ಭವಾನಿಶಂಕರ ಪಿಂಡಿಮನೆ ದಾನಿಗಳ ನಾಮಫಲಕ ಅನಾವರಣ ಮಾಡುವರು.ಮುಖ್ಯ ಅತಿಥಿಗಳಾಗಿ

ಬೆಂಗಳೂರಿನ ನಾಮ್ಧಾರಿ ಸೀಡ್ಸ್ನ ಹಿರಿಯ ಉಪಾಧ್ಯಕ್ಷ ಎಂ.ಎಸ್. ಸುಬ್ರಹ್ಮಣ್ಯ ಮದುವೆಗದ್ದೆ, ಹಿರಿಯ ತಜ್ಞ ವೈದ್ಯರಾದ ಡಾ.ತಾಜುದ್ದೀನ್, ಬೆಂಗಳೂರಿನ ಫಾರ್ಮೆಡ್ ಗ್ರೂಪ್ಸ್ನ ಹಿರಿಯ ಉಪಾಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಬೆಂಗಳೂರಿನ ಹಿರಿಯ ಸಾಪ್ಟ್ವೇರ್ ತಜ್ಞ ಕೆ. ಆರ್. ಆನಂದ ಕಲ್ಲುಗದ್ದೆ, ಶಿವಮೊಗ್ಗದ ಉದ್ಯಮಿ ಸತೀಶ್ ದೋಳ, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ತೇಜಾವತಿ ಮಣೀಶ್ ಉಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಬಿ. ದಯಾನಂದ ಭಾಗವಹಿಸುವರು.
ಮಧ್ಯಾಹ್ನ ಗಂಟೆ 1 ರಿಂದ 2-30 ರ ತನಕ ಮಾಧುರ್ಯ ಮ್ಯೂಸಿಕಲ್ಸ್ ಮಂಗಳೂರು ಇವರಿಂದ ಸಂಗೀತ ಲಹರಿ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2.30ರಿಂದ

ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ‘ನೆನಪಿನಂಗಳ’ ನಡೆಯಲಿದೆ. ಎ.ಓ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷಯ್ ಕುರುಂಜಿ ಉದ್ಘಾಟಿಸುವರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಬಿ. ದಯಾನಂದ ಅಧ್ಯಕ್ಷತೆ ವಹಿಸುವರು.
ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಅಧ್ಯಕ್ಷ ಪಿ. ಬಿ. ದಿವಾಕರ ರೈ, ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ ಎಂ. ಪಿ. ಉಮೇಶ್,
ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಉಪಾಧ್ಯಕ್ಷ ಎ. ಕೆ. ಜತ್ತಪ್ಪ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್, ಉದ್ಯಮಿ ಯು. ಬಿ. ಚಕ್ರಪಾಣಿ, ಬೆಂಗಳೂರಿನ ಉದ್ಯಮಿ ಜಯರಾಮ ಚೌಟಾಜೆ ಗೌರವ ಉಪಸ್ಥಿತರಿರುವರು.
ಹಿರಿಯ ವಿದ್ಯಾರ್ಥಿಗಳಾದ ಎಂ. ಎಸ್. ಸುಬ್ರಹ್ಮಣ್ಯ ಮದುವೆಗದ್ದೆ, ಸಂತೋಷ್ ಕುತ್ತಮೊಟ್ಟೆ, ಡಾ.ಉಮ್ಮರ್ ಬೀಜದಕಟ್ಟೆ, ಡಾ.ಲೀಲಾಧರ ಡಿ. ವಿ. ತೇಜಾವತಿ ಮಣೀಶ್, ಪಿ. ಕೆ. ಸುಲೋಚನ, ಎಸ್. ಪಿ. ಯೋಗೀಶ್ ಪೆಲತ್ತಡ್ಕ, ದಿನೇಶ್ ಚೋಡಿಪಣೆ,ಡಾ.ನಿತಿನ್ ಪ್ರಭು,ಡಾ.ಮಾನಸ ಕೆ.ವಿ,
ಡಾ.ತಾಜುದ್ದೀನ್ ಕೆ. ಎಂ.ಕೆ. ಆರ್. ಆನಂದ ಕಲ್ಲುಗದ್ದೆ,ಸತೀಶ ಕೊಯಿಂಗಾಜೆ,ಲೆ.ಕ.ಶ್ರೀಕಾಂತ ಡಿ. ಕೆ., ಸಿ. ಟಿ. ಸುರೇಶ್ ಕುಮಾರ್, ಸತೀಶ್ ದೋಳ,ಡಾ. ಪಿ. ಜೆ. ಆ್ಯಂಟನಿ,ಬಿ. ಕಿರಣ್ ಬಿಳಿಯಾರು,
ಗಣೇಶ್ ಭಟ್ ಡಿ. ಎಸ್,ಯು. ಬಿ. ಶಿವಶಂಕರ ಉಳುವಾರು ಭಾಗವಹಿಸಲಿದ್ದಾರೆ ಎಂದು ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಸಂಚಾಲಕರಾದ ಕೆ.ಆರ್.ಗಂಗಾಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.