ಸುಳ್ಯ:ಅಂತಾರಾಜ್ಯ ರಸ್ತೆಯಲ್ಲಿ ಕಾಂಞಂಗಾಡ್-ಪಾಣತ್ತೂರು- ಕಲ್ಲಪಳ್ಳಿ-ಸುಳ್ಯ ಮಾರ್ಗದಲ್ಲಿ ಜು.27ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇನ್ನೊಂದು ಬಸ್ ಸಂಚಾರ ಪ್ರಾರಂಭಿಸಲಿದೆ. ಪಾಣತ್ತೂರಿನಿಂದ ಬೆಳಿಗ್ಗೆ 5:50 ಹೊರಟು ಸುಳ್ಯ6:40ಕ್ಕೆ ತಲುಪಲಿದೆ. ಸುಳ್ಯದಿಂದ ಬೆಳಿಗ್ಗೆ 6:50ಕ್ಕೆ ಹೊರಟು ಪಾಣತ್ತೂರಿಗೆ 7:40ಕ್ಕೆ ತಲುಪಲಿದೆ
ಬೆಳಿಗ್ಗೆ ಪಾಣತ್ತೂರಿನಿಂದ 7:50ಕ್ಕೆ ಹೊರಟು 9.20ಕ್ಕೆ ಕಾಂಞಂಗಾಡು 9: ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ. ಸುಳ್ಯ-ಪಾಣತ್ತೂರು- ಕಾಞಂಗಾಡ್ ರಸ್ತೆಯಲ್ಲಿ ಈಗಾಗಲೇ ಒಂದು ಬಸ್ ಓಡಾಟ ನಡೆಸುತಿದೆ.