ನವದೆಹಲಿ: ದೆಹಲಿಯಲ್ಲಿ ಮೊದಲ ಆವೃತ್ತಿಯ ಕೊಕ್ಕೊ ವಿಶ್ವಕಪ್ ಪಂದ್ಯಗಳು ಆರಂಭವಾಗಿವೆ. ಟೂರ್ನಿಯು ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆಯುತ್ತಿವೆ.ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್ಐ) ನಿರ್ವಹಿಸುತ್ತಿರುವ ಕೊಕ್ಕೊ ವಿಶ್ವಕಪ್ ಟೂರ್ನಿ ಸೋಮವಾರ ಆರಂಭವಾಗಿದ್ದು, 19ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಪುರುಷರ ವಿಭಾಗದಲ್ಲಿ ಭಾರತ ಸೇರಿದಂತೆ
20 ದೇಶಗಳ ತಂಡಗಳು ಭಾಗವಹಿಸಿದ್ದರೆ, ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಪಾಲ್ಗೊಂಡಿವೆ.
ಪ್ರತೀಕ್ ವೈಕರ್ ಅವರು ಭಾರತದ ಪುರುಷರ ತಂಡದ ನಾಯಕರಾಗಿದ್ದರೆ, ಪ್ರಿಯಾಂಕಾ ಇಂಗ್ಳೆ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಗೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಅವರು ಉದ್ಘಾಟಿಸಿದರು. ಮೊದಲ ಪಂದ್ಯದಲ್ಲಿ ಭಾರತ ಜಯ ಗಳಿಸಿದೆ. ಭಾರತ ನೇಪಾಲ ತಂಡವನ್ನು ಸೋಲಿಸಿ ಶುಭರಂಭ ಮಾಡಿತು.