ಕೋಝಿಕ್ಕೋಡ್: ಕೇರಳ ರಾಜ್ಯದಲ್ಲಿ ಕೋಝಿಕ್ಕೋಡ್ನ ಕೊಯಿಲಾಂಡಿಯಲ್ಲಿ ದೇವಾಲಯದ ಉತ್ಸವಕ್ಕಾಗಿ ತಂದಿದ್ದ ಆನೆಗಳು ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಓಡಿದ ಹಿನ್ನೆಲೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೊಯ್ಲಾಂಡಿಯ ಮಣಕ್ಕುಳಂಙರ ದೇವಾಲಯದಲ್ಲಿ ನಡೆದ
ಉತ್ಸವದ ಸಂದರ್ಭದಲ್ಲಿ ಆನೆಗಳು ಕೆರಳಿ ಓಡಿದೆ ಈ ಸಂದರ್ಭ ಮೂವರು ಜನರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಅಧಿಕ ಮಂದಿ ಜನರು ಗಾಯಗೊಂಡಿದ್ದಾರೆ. ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ರೊಚ್ಚಿಗೆದ್ದು ಓಡಿದ ಕಾರಣ ಅನಾಹುತ ನಡೆಯಿತು. ಉತ್ಸವಕ್ಕೆ ತಂದಿದ್ದ ಒಂದು ಆನೆ ಆಕ್ರಮಣಕಾರಿಯಾಗಿ ಮತ್ತೊಂದು ಆನೆಯನ್ನು ತಿವಿದದ್ದು ಘರ್ಷಣೆಗೆ ಕಾರಣವಾಯಿತು ಎಂದು ಹೇಳಲಾಗುತಿದೆ. ಆನೆಗಳು ಓಡಿ ಬರುವುದು ನೋಡಿ ಜನರು ಆತಂಕಗೊಂಡು ಓಡುವ ಸಂದರ್ಭದಲ್ಲಿ 3 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯಗಳಾಗಿವೆ. ದೇವಸ್ಥಾನದ ಕಚೇರಿ ಮತ್ತಿತರ ಕಡೆ ಹಾನಿ ಸಂಭವಿಸಿದ