ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರು ಜ.7 ರಂದು ಕೇರಳ ವಿಧಾನ ಸಭೆ ಸಚಿವಾಲಯ, ತಿರುವನಂತಪುರದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪುಸ್ತಕ ಮೇಳ- 3ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು
ಪುಸ್ತಕ ಮೇಳವನ್ನು ಉದ್ಘಾಟಿಸಿದರು. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಮೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಕೇರಳ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ವಿ.ಡಿ. ಸತೀಶನ್, ಕೇರಳ ರಾಜ್ಯದ ಸಚಿವರಾದ ವಿ.ಶಿವನ ಕುಟ್ಟಿ, ಸಾಜಿ ಚೆರಿಯನ್, ಜಿ.ಆರ್. ಅನಿಲ್ ಭಾಗವಹಿಸಿದ್ದರು.ಈ ಸಂದರ್ಭಲ್ಲಿ ಲೇಖಕರಾದ ಎಂ. ಮುಕುಂದನ್ ಅವರನ್ನು ಸನ್ಮಾನಿಸಲಾಯಿತು. ಲೇಖಕರಾದ ದೇವದತ್ ಪಟ್ಟನಾಯಕ್ ಉಪಸ್ಥಿತರಿದ್ದರು.