ಸುಳ್ಯ: ಸುಳ್ಯ-ಪಾಣತ್ತೂರು- ಕಾಂಞಗಾಡ್ ಮಧ್ಯೆ ಓಡಾಟ ನಡೆಸುವ ಕೇರಳ ಕೆಆಸ್ಆರ್ಟಿಸಿ ಬಸ್ ಸೇವೆಯ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಪಾಣತ್ತೂರು- ಸುಳ್ಯ ಮಧ್ಯೆ
ಮುಂಜಾನೆ 5.40ಕ್ಕೆ ಪಾಣತ್ತೂರಿನಿಂದ ಹೊರಟು 6.40ಕ್ಕೆ ಸುಳ್ಯ ತಲುಪಿ 6.50ಕ್ಕೆ ಸುಳ್ಯದಿಂದ ಹಿಂತಿರುಗುತ್ತಿದ್ದ ಬಸ್ ನಿಲ್ಲಿಸಲಾಗಿದೆ. ಅದರ ಬದಲಿಗೆ
ಬೆಳಿಗ್ಗೆ 9.40ಕ್ಕೆ ಪಾಣತ್ತೂರಿನಿಂದ ಹೊರಟು 10.40ಕ್ಕೆ ಸುಳ್ಯಕ್ಕೆ ಆಗಮಿಸಿ 10.45ಕ್ಕೆ ಸುಳ್ಯದಿಂದ ಹೊರಡಲಿದೆ. ಒಂದೆರಡು ದಿನಗಳಲ್ಲಿ ಸಮಯ ಬದಲಾವಣೆಯೊಂದಿಗೆ ಬಸ್ ಓಡಾಟ ಅರಂಭಿಸಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.
ಬದಲಾವಣೆಯೊಂದಿಗೆ ಆರಂಭವಾಗಲಿರುವ ಬಸ್ ವೇಳಾಪಟ್ಟಿ.
ಮೊದಲ ಸರ್ವೀಸ್:
ಪಾಣತ್ತೂರಿನಿಂದ ಹೊರಡುವುದು ಬೆಳಿಗ್ಗೆ 07:20
ಸುಳ್ಯಕ್ಕೆ ತಲುಪುವುದು ಬೆಳಿಗ್ಗೆ 08:20: ಸುಳ್ಯದಿಂದ ಹೊರಡುವುದು ಬೆಳಿಗ್ಗೆ 08:45, ಪಾಣತ್ತೂರಿಗೆ ತಲುಪುವುದು ಬೆಳಿಗ್ಗೆ 09:45
ಎರಡನೇ ಸರ್ವೀಸ್:
ಪಾಣತ್ತೂರಿನಿಂದ ಹೊರಡುವುದು ಬೆಳಿಗ್ಗೆ 09:40
ಸುಳ್ಯಕ್ಕೆ ತಲುಪುವುದು ಬೆಳಿಗ್ಗೆ 10:40, ಸುಳ್ಯದಿಂದ ಹೊರಡುವುದು ಬೆಳಿಗ್ಗೆ 10:45,
ಪಾಣತ್ತೂರಿಗೆ ತಲುಪುವುದು ಬೆಳಿಗ್ಗೆ 11:45,
ಮೂರನೇ ಸರ್ವೀಸ್:
ಪಾಣತ್ತೂರಿನಿಂದ ಹೊರಡುವುದು ಸಂಜೆ 3:20
ಸುಳ್ಯಕ್ಕೆ ತಲುಪುವುದು ಸಂಜೆ 4:20,
ಸುಳ್ಯದಿಂದ ಹೊರಡುವುದು ಸಂಜೆ 4:35,
ಪಾಣತ್ತೂರಿಗೆ ತಲುಪುವುದು ಸಂಜೆ 5:35.