ಮಂಡೆಕೋಲು:ಮಂಡೆಕೋಲು ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಜಲಸಂರಕ್ಷಣೆ ವಿಷಯದಲ್ಲಿ ಚಿತ್ರಕಲೆ ಸ್ಫರ್ಧೆ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ವೇದಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಭಾಷೆಯ ಮಹತ್ವದ ಬಗ್ಗೆ
ಲಾವಣ್ಯಬೊಳುಗಲ್ಲು ತಿಳಿಸಿದರು.ಸರಕಾರಿ ಉನ್ನತ್ತೀಕರಿಸಿದ ಶಾಲೆ ಮಂಡೆಕೋಲು ಇಲ್ಲಿಯ ಶಾಲಾ ಮುಖ್ಯಮಂತ್ರಿ ಯಕ್ಷಿತಾ ಧ್ವಜದ ಮಹತ್ವ ಕುರಿತು ಮಾತನಾಡಿದರು. ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮಂಡೆಕೋಲು ಸಹಯೋಗದಿಂದ ನಡೆಸಲ್ಪಡುವ ಗ್ರಾಮದ ಸರಕಾರಿ ಶಾಲೆಯ ಮಕ್ಕಳೀಗೆ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು. ಗ್ರಾಮದ ಸ. ಉ. ಹಿ ಪ್ರಾ ಶಾಲೆ, ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರಾಲ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು
ಗ್ರಾಮ ಪಂಚಾಯತ್ ಅರಿವು ಕೇಂದ್ರೆ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿ ನಿರೂಪಿಸಿ ವಂದಿಸಿದರು.















