ಬೆಳ್ಳಿಪ್ಪಾಡಿ:ಕೇರಳ ರಾಜ್ಯ ಕುಟುಂಬಶ್ರೀ ಮಿಷನ್ ಆಯೋಜಿಸಿದ್ದ ಕಲೋತ್ಸವದಲ್ಲಿ ಕಥಾ ರಚನೆ ಮತ್ತು ಕವನ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ವೇತಾ ಬೆಳ್ಳಿಪ್ಪಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಚಟ್ಟಂಚಾಲ್, ಕೋಳಿಯಡ್ಕದಲ್ಲಿ ನಡೆದ ತಾಲೂಕು ಮಟ್ಟದ
ಕಲೋತ್ಸವದಲ್ಲಿ ಭಾಗವಹಿಸಿ ಕಥಾ ರಚನೆ ಮತ್ತು ಕವನ ರಚನೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ
ಇವರು ಉದುಮ ಪಾಲಕುನ್ನು ಎಂಬಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಶಿಪ್ ಪಡೆದು ಜೂನ್ 7 ರಂದು ಪಿಲಿಕೋಡ್ ಎಂಬಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ರಮೇಶ್ ಬೆಳ್ಳಿಪ್ಪಾಡಿ ಇವರ ಪತ್ನಿ ಶ್ವೇತಾ ಮೂಲತಃ ಕಡಬ ತಾಲೂಕಿನ ಎಡಮಂಗಲ ಗ್ರಾಮದ ನಾಗನಕಜೆ ಬಾಲಕೃಷ್ಣ ಗೌಡರ ಪುತ್ರಿ.