ಕಡಬ: ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಡಬದಿಂದ ಸುಳ್ಯ ಸಂಪರ್ಕ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ. ಸುಬ್ರಹ್ಮಣ್ಯ, ಕಡಬ, ಇಚಿಲಂಪಾಡಿ, ಆತೂರು, ಪಂಜ ಮೊದಲಾದೆಡೆ
ಭಾರೀ ಗಾಳಿ ಮಳೆಯಾಗಿದ್ದು, ಕಡಬ – ಪಂಜ ರಸ್ತೆಯ ಪುಳಿಕುಕ್ಕು ರಸ್ತೆಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ರಸ್ತೆ ಸಂಚಾರದಲ್ಲಿ ತಡೆಯುಂಟಾಗಿದೆ. ಬದಲಿ ಮಾರ್ಗವಾಗಿರುವ ಎಡಮಂಗಲ – ನಿಂತಿಕಲ್ಲು ಮಾರ್ಗದಲ್ಲೂ ಬೃಹತ್ ಮರ ಬಿದ್ದ ಪರಿಣಾಮ ಸಂಚಾರ ವ್ಯತ್ಯಯ ಆಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮೇ.11ರಂದು ಸಂಜೆ ಕಡಬ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ.