ಸುಳ್ಯ:ಸುಳ್ಯದಲ್ಲಿ ಮೇ.11ರಂದು ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭರ್ಜರಿ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು 3.30ರ ಬಳಿಕ ಹನಿ ಮಳೆ ಆರಂಭಗೊಂಡಿತ್ತು.ಕೆಲ ಹೊತ್ತು ಹನಿ ಮಳೆ ಸುರಿದು ನಿಧಾನಕ್ಕೆ ಮಳೆ ಬಲಗೊಂಡಿತು. 4.30ರ ಬಳಿಕ ಸುಮಾರು ಗುಡುಗು ಸಿಡಿಲಿನ
ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ಬಳಿಕ ಹನಿ ಮಳೆ ಮುಂದುವರಿದಿದೆ. ಹಲವು ದಿನಗಳಿಂದ ಮೋಡ ಕವಿದ ವಾತಾವರಣ, ಹನಿ ಮಳೆಯಾಗುತ್ತಿದ್ದರೂ ಸುಳ್ಯದಲ್ಲಿ ಉತ್ತಮ ಮಳೆಯಾಗಿರಲಿಲ್ಲ. ಬಿಸಿಲ ಝಳಕ್ಕೆ ಏರಿದ ಸೆಕೆಯಿಂದ ಬೆಂದಿದ್ದ ನಗರಕ್ಕೆ ತಂಪೆರೆದು ಉತ್ತಮ ಮಳೆಯಾಗಿದೆ.ಸುಳ್ಯ ತಾಲೂಕಿನ ಹಾಗೂ
ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಶನಿವಾರ ಸಂಜೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಸುಳ್ಯ,ಕಡಬ, ಪುತ್ತೂರು,ಬೆಳ್ತಂಗಡಿ, ಬಂಟ್ವಾಳ ಕಾಸರಗೋಡು ಕೆಲವು ಕಡೆ ಮಳೆಯಾಗಿದೆ.
ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೆ.11ರಿಂದ 14ರ ವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.