ಸುಳ್ಯ: ಸುಳ್ಯದ ಪ್ರತಿಷ್ಠಿತ ಮತ್ತು ಜನಪ್ರಿಯ ಇಲೆಕ್ಟ್ರಾನಿಕ್ಸ್ ಮಳಿಗೆ ಜೆ.ಎಸ್.ಇಲೆಕ್ಟ್ರಾನಿಕ್ಸ್ ತನ್ನ 23ನೇ ವರ್ಷಾಚರಣೆ ಮತ್ತು ಹಬ್ಬಗಳ ಸಂಭ್ರಮದ ಪ್ರಯುಕ್ತ ಹೊರತಂದ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮ ಜ.11ರಂದು ಸಂಸ್ಥೆಯ ಮುಂಭಾಗದಲ್ಲಿ ನೆರವೇರಿತು.
ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ
ಇತರ ಅತಿಥಿಗಳು ಡ್ರಾ ನೆರವೇರಿಸಿದರು.ಪ್ರಥಮ, ದ್ವಿತೀಯ, ತೃತೀಯ ಅದೃಷ್ಟಶಾಲಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ರಿಯಾಝ್ ಕಟ್ಟೆಕ್ಕಾರ್ಸ್, ಪ್ರಮುಖಾದ ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಹಮೀದ್ ಜನತಾ, ಅಬ್ದುಲ್ ಮಜಿದ್ ಜನತಾ, ಇಬ್ರಾಹಿಂ ಗಾಂಧಿನಗರ, ಅಬ್ದುಲ್ ಬಶೀರ್ ಸಪ್ನಾ, ಜೆ.ಎಸ್. ಅಬ್ದುಲ್ ಮಾಲಕರಾದ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.