ಐವರ್ನಾಡು:ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗು ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು
ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ. ಕಬಡ್ಡಿ ಅಂಕಣ, ಗ್ಯಾಲರಿ ನಿರ್ಮಾಣಕ್ಕೆ ಫೆ.14ರಂದು ಗುದ್ದಲಿ ಪೂಜೆ ನಡೆಯಿತು.ಹಿರಿಯರಾದ ಕೊರಗಪ್ಪ ಗೌಡ ಪೂಜಾರಿಮನೆ ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆಯ ಮೊದಲು ನಿಡುಬೆ ಶ್ರೀ ಉಳ್ಳಾಕುಲು ಮಾಡತ್ತಕಾನ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ಪಂದ್ಯಾಟದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ ಸ್ವಾಗತಿಸಿ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರ.ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ, ಮಹೇಶ ಜಬಳೆ,ವೆಂಕಪ್ಪ ಗೌಡ ಜೆ.ಟಿ, ದಿನೇಶ ಮಡ್ತಿಲ, ಐವರ್ನಾಡು ಪ್ರಾಢ ಶಾಲಾ ಮುಖ್ಯೋಪಾಧ್ಯಾಯ ಸೂಫಿ ಪೆರಾಜೆ, ಶಿಕ್ಷಕರಾದ ನಾರಾಯಣ ಬೊಳ್ಳೂರು,ಕಾಲೇಜಿನ ಉಪಾನ್ಯಾಸಕ ಕಮಲಾಕ್ಷ ,ದಾಮೋದರ ಜಬಳೆ , ಕೇಶವ ಹಸಿಯಡ್ಕ, ರಂಜನ್ ಮೂಲೆತೋಟ, ಸತೀಶ ಜಬಳೆ, ಬಾಲಚಂದ್ರ ಪಲ್ಲತ್ತಡ್ಕ, ಸತೀಶ ಎಡಮಲೆ, ಅನಂತ ಖಂಡಿಗೆಮೂಲೆ, ಜುನೈದ್ ನಿಡುಬೆ, ಶಿವಪ್ರಸಾದ್ ಕಟ್ಟತ್ತಾರು, ದಯಾನಂದ ಕಟ್ಟತ್ತಾರು, ಪ್ರಭಾಕರ ಕುತ್ಯಾಡಿ, ಬಾಲಕೃಷ್ಣ ಮಡ್ತಿಲ, ನಟರಾಜ್ ಸಿ.ಕೂಪ್, ಜಯಪ್ರಸಾದ್ ಕಜೆತ್ತಡ್ಕ, ಮೋಹನ ಸುಂದರ್, ಸಚಿನ್ ಕೊಚ್ಚಿ,ಗೋಪಾಲಕೃಷ್ಣ ಚೆಮ್ನೂರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಶಾಂತಾರಾಮ ಕಣಿಲೆಗುಂಡಿ ವಂದಿಸಿದರು.