ಅಹಮದಾಬಾದ್: ಯುವ ಬ್ಯಾಟರ್ ಸಾಯಿ ಸುದರ್ಶನ್ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ ಐಪಿಎಲ್ ಫೈನಲ್ನಿಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಗುಜರಾತ್ ಟೈಟನ್ಸ್ 215 ರನ್ ಗುರಿ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್
ಬಾರಿಸಿದೆ.ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಫೋರ್, 6 ಸಿಕ್ಸರ್ ನೆರವಿನಿಂದ 96 ರನ್ ಸಿಡಿಸಿದರು. 4 ರನ್ ಅಂತರದಲ್ಲಿ ಶತಕ ವಂಚಿತರಾದರು. ವೃದ್ಧಿಮಾನ್ ಸಾಹ (54), ಅರ್ಧ ಶತಕ ಬಾರಿಸಿದರು.ಆರಂಭದಿಂದಲೂ ಸರಾಗವಾಗಿ ರನ್ ಗಳಿಸುತ್ತಾ ಬಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಶುಬ್ಮನ್ ಗಿಲ್ 39, ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 21 ರನ್ ಗಳಿಸಿದರು.ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.