ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಗಾಳಿ ಸಹೀತ ಮಳೆಯಾಗಿದೆ. ಗುಡುಗು, ಸಿಡಿಲು, ಗಾಳಿ ಅಬ್ಬರದೊಂದಿಗೆ ಮಳೆ ಬಂದಿದೆ. ಕೆಲವೆಡೆ ಉತ್ತಮ ಮಳೆಯಾದರೆ ಕೆಲವೆಡೆ ಸಾಮಾನ್ಯ ಮಳೆಯಾಗಿದೆ. ಸುಬ್ರಹ್ಮಣ್ಯ ಭಾಗದಲ್ಲಿ ಗಾಳಿ ಸಹೀತ
ಮಳೆಯಾಗಿದೆ. ಗಾಳಿಗೆ ಸುಬ್ರಹ್ಮಣ್ಯ- ಕಡಬ ರಸ್ತೆಯಲ್ಲಿ ಕೆಲವು ಕಡೆ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಸುಳ್ಯ ನಗರದಲ್ಲಿ ಗುಡುಗು ಸಹೀತ ಸಣ್ಣ ಮಳೆಯಾಗಿದೆ. ಕೇನ್ಯದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದೆ. ಕಲ್ಲಾಜೆ ಗುಡುಗು ಮಿಂಚು ಸಹೀತ ಮಳೆಯಾಗಿದೆ. ನೆಟ್ಟಣ ಭಾರಿ ಗಾಳಿ, ಗಡುಗು ಸಹಿತ ಭರ್ಜರಿ ಮಳೆಯಾಗಿದೆ. ಕಲ್ಮಡ್ಕ, ಬಳ್ಪ, ಕರಿಕ್ಕಳ, ಎಣ್ಮೂರು, ಕಡಬ, ಪಂಜ, ಕಳಂಜ ಭಾಗದಲ್ಲಿ ಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ.ಕುಲ್ಕುಂದದಲ್ಲಿ ಸಾಧಾರಣ ಮಳೆಯಾಗಿದೆ ಎಂದು ವರದಿಯಾಗಿದೆ.