ಮಂಗಳೂರು: ದ.ಕ. ಜಿಲ್ಲಾ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಯತೀಶ್ ಎನ್. ರವರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರು ಮಂಗಳೂರಿನಲ್ಲಿ
ಭೇಟಿಯಾಗಿ ಟಿ. ಎಂ. ಶಹೀದ್ ತೆಕ್ಕಿಲ್ ಸನ್ಮಾನ ಸಮಾರಂಭದ ಆಹ್ವಾನ ಪತ್ರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಪರಶುರಾಮ ಚಿಲ್ತಡ್ಕ, ಇಕ್ಬಾಲ್ ಏಲಿಮಲೆ,ಕೆ. ಎಂ.ಮುಸ್ತಫ, ರಂಜಿತ್ ರೈ, ರಾಧಾಕೃಷ್ಣ ಬೊಳ್ಳೂರ್ ಮೊದಲಾವರು ಇದ್ದರು.