ಅಹಮದಾಬಾದ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ಗೆ 256 ರನ್ಗಳ ಬೃಹತ್ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿದೆ.ಭಾರತ ತಂಡದ ಪರವಾಗಿ ಆರಂಭಿಕ ಬ್ಯಾಟರ್ಗಳಾದ
ಸಂಜು ಸ್ಯಾಮ್ಸನ್(89 ರನ್, 45ಎಸೆತ 5 ಬೌಂಡರಿ, 8 ಸಿಕ್ಸರ್ ) ಹಾಗೂ ಅಭಿಷೇಕ್ ಶರ್ಮಾ (52 ರನ್, 22ಎಸೆತ 6 ಬೌಂಡರಿ, 3 ಸಿಕ್ಸರ್ ) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 98 ರನ್ ಕಲೆಹಾಕಿತು. ನಂತರ ಬಂದ ಇಶಾನ್ ಕಿಶನ್ (54 ರನ್, 25ಎಸೆತ 4 ಬೌಂಡರಿ, 4 ಸಿಕ್ಸರ್ ) ಕೂಡ ಅಬ್ಬರಿಸಿದರು. ಸಂಜು ಮತ್ತು ಅಂತಿಮವಾಗಿ ಇಶನ್ ಶತಕದ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿದರು.ಶಿವಂ ದುಬೆ (26 ರನ್, 8ಎಸೆತ,3 ಬೌಂಡರಿ, 2 ಸಿಕ್ಸರ್ ) ಮೂಲಕ ಅಬ್ಬರಿಸಿದರು. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭಾರತ ತಂಡವು ಬೃಹತ್ ಗುರಿ ನೀಡಿದೆ. ಹಾರ್ದಿಕ್ ಪಾಂಡ್ಯ(18), ಸೂರ್ಯಕುಮಾರ್ ಯಾದವ್(0), ತಿಲಕ್ ವರ್ಮ(8) ರನ್ ಗಳಿಸಿದರು.
ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಭಾರತದ ಬ್ಯಾಟರ್ಗಳು 18 ಬೌಂಡರಿ ಹಾಗೂ 19 ಸಿಕ್ಸರ್ ಸಿಡಿಸಿದರು. ಸಂಜು ಸ್ಯಾಮ್ಸನ್ ಸತತ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆಸರೆಯಾದರು.












