ಗುತ್ತಿಗಾರು:ಇಂಪಾರ್ಟೆಂಟ್ ಎಫ್ಸಿ ವತಿಯಿಂದ ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅತಿಥಿಯಾಗಿ ಎಬಿವಿಪಿ ಸುಳ್ಯ ತಾಲೂಕು ಸಂಚಾಲಕ ನಂದನ್ ಪವಿತ್ರಮಜಲು ಭಾಗವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮವನ್ನು
ಇಂಪಾರ್ಟಂಟ್ ಎಫ್ಸಿ ಕಾರ್ಯದರ್ಶಿ ಕಿರಣ್ ವಳಲಂಬೆ ಉದ್ಘಾಟಿಸಿದರು. ಅಮರ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ಲಬ್ನ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಶ್ರೀಶರಣ್ ಮೊಗ್ರ, ಮೋನಿಶ್ ಬಾಕಿಲ, ಪ್ರಧಾನ ಕಾರ್ಯದರ್ಶಿ ಆಶ್ಲೇಶ್ ಕೆ.ಡಿ., ನಿರ್ದೇಶಕ ಅಮಿತ್ ನಾಯಕ್, ಸದಸ್ಯರಾದ ವೃಶಾಂಕ ಪಾಂಚಜನ್ಯ, ಪ್ರೀತಂ ಎಸ್. ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.ಸ್ಥಳೀಯರ ಸಹಕಾರದಿಂದ ಅಭಿಯಾನ ನಡೆಸಲಾಯಿತು.