ಸುಳ್ಯ:ಸುಳ್ಯದ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಹಾಗು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ 58ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.14ರಿಂದ 18ರ ತನಕ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ
5 ದಿನಗಳ ಗಣೇಶೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ಸೆ.14ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹವನ, ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಪೂ.9ಕ್ಕೆಉತ್ಸವದ ಉದ್ಘಾಟನೆ ನಡೆಯಲಿದೆ. ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಸಿದ್ದಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷಗೋಪಾಲಕೃಷ್ಣ ಕೆ.ಎಸ್.ಅಧ್ಯಕ್ಷತೆ ವಹಿಸುವರು.
ಪೂ.10ರಿಂದ 5ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳ ತಂಡಕ್ಕೆ ಭಜನಾ ಸ್ಪರ್ಧೆ ನಡೆಯಲಿದೆ.ಸಂಜೆ 4-30 ರಿಂದ 5-30ರವರೆಗೆ ಶ್ರೀ ಪಾಂಚಜನ್ಯ ಕಲಾತಂಡ ಸುಳ್ಯ ಇವರಿಂದ ಯಕ್ಷ ಗಾನ ವೈಭವ ನಡೆಯಲಿದೆ.ಸಂಜೆ ಗಂಟೆ 6ರಿಂದ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ. ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ

ಶಾಸಕಿ ಭಾಗೀರಥಿ ಮುರುಳ್ಯ,ಡಾ. ಹರಪ್ರಸಾದ್ ತುದಿಯಡ್ಕ ಮತ್ತಿತರರು ಭಾಗವಹಿಸುವರು.ರಾತ್ರಿ 8ರಿಂದ ಕೆ.ಆರ್. ಗೋಪಾಲಕೃಷ್ಣ ಬಳಗ ಸುಳ್ಯ ಇವರಿಂದ ದೇವಾಭಿಮಾನ ದೇಶಾಭಿಮಾನ ಗಾನಾಮೃತ ನಡೆಯಲಿದೆ.
ಸೆ.15 ಮಂಗಳವಾರ ಅ.3ರಿಂದ ಭಜನಾ ಕಾರ್ಯಕ್ರಮ,ಸಂಜೆ 6 ರಿಂದ ಗಜಾನನ ನಾಟ್ಯಾಂಜಲಿ ಕಲಾಕ್ಷೇತ್ರ ಮುಳ್ಳೇರಿಯಾ ಇವರಿಂದ ನಾಟ್ಯ ವೈಭವ ನಡೆಯಲಿದೆ
ಸೆ.16 ಬುಧವಾರ ಅ.3ರಿಂದ ಭಜನಾ ಕಾರ್ಯಕ್ರಮ ಸಂಜೆ.6 ರಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.17 ಗುರುವಾರ ಅ. 2-30 ರಿಂದ ಭಜನಾ ಕಾರ್ಯಕ್ರಮ
ಸಂಜೆ 5ರಿಂದ ಜಿಲ್ಲೆಯ ಪ್ರಸಿದ್ಧ ತೆಂಕುತಿಟ್ಟು ಯಕ್ಷಗಾನ ಕಲಾವಿದರಿಂದ
ಸತ್ಯ ಹರಿಶ್ಚಂದ್ರ ಯಕ್ಷಗಾನ ನಡೆಯಲಿದೆ. ಸೆ.18 ಶುಕ್ರವಾರ ಬೆಳಿಗ್ಗೆ ಗಂಟೆ 7ರಿಂದ ಶ್ರೀ ವಿಘ್ನೆಶ್ವೇರನ ಸನ್ನಿಧಿಯಲ್ಲಿ 108 ತೆಂಗಿನಕಾಯಿ ಗಣಪತಿ ಹವನ ಮಧ್ಯಾಹ್ನ 12ಕ್ಕೆ ಗಣಪತಿ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ರಿಂದ ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ. ಅಲಂಕೃತ ಮಂಟಪದಲ್ಲಿ, ವಿಶೇಷ ವಾದ್ಯಘೋಷಗಳೊಂದಿಗೆ, ಸುಳ್ಯದ ಪ್ರಮುಖ ಬೀದಿಗಳಲ್ಲಿ ಕುಣಿತ ಭಜನೆಯೊಂದಿಗೆ ಭವ್ಯ ಶೋಭಾಯಾತ್ರೆ ಸಾಗಿ, ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು. ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಮತ್ತು ರಾತ್ರಿ 8.30ಕ್ಕೆ ಮಹಾ ಪೂಜೆ ನಡೆಯಲಿದೆ ಎಂದು ವಿನಯಕುಮಾರ್ ಕಂದಡ್ಕ ವಿವರಿಸಿದರು.











