ಸುಳ್ಯ:ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವತಿಯಿಂದ 43ನೇ ವರ್ಷದ ಶ್ರೀ ಗಣೇಶೋತ್ಸವ ಸೆ.14ರಿಂದ 16ರ ತನಕ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮದೊಂದಿಗೆ ನಡೆಯಲಿದೆ. 3 ದಿನಗಳ ಗಣೇಶೋತ್ಸವದ ಕಾರ್ಯಕ್ರಮದಲ್ಲಿ
ಸೆ.14ರಂದು ಪೂ.7ಕ್ಕೆ ಸ್ಥಳಶುದ್ಧಿ, ಗಣಪತಿ ಹೋಮ, 8ಕ್ಕೆ ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ರಾತ್ರಿ 7ರಿಂದ
ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ ನಡೆಯಲಿದೆ.ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಎಸ್. ಸಾಂಸ್ಕ್ರತಿಕ ಕಾರ್ಯಕ್ರಮದ

ಉದ್ಘಾಟನೆ ನೆರವೇರಿಸುವರು.ಬಳಿಕ ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ ನೇತೃತ್ವದಲ್ಲಿ ವಿದುಷಿ ಜಯಶ್ರೀ ತೇಜಸ್ವಿ ತಂಡದಿಂದ ನೃತ್ಯ ವೈಭವ ನಡೆಯಲಿದೆ.ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.
ಸೆ.15ರಂದು ಪೂ.8ಕ್ಕೆ ಪೂಜೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ. ರಾತ್ರಿ 7ರಿಂದ ಕೇರಳ – ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ ಭಕ್ತಿ ಹಾಗೂ ಚಿತ್ರಗೀತೆಗಳ ಸಂಗೀತ ರಸಮಂಜರಿ’ಬೀಟ್ಸ್ ಆಫ್ ಕ್ಯಾಲಿಕಟ್ ಮ್ಯೂಸಿಕಲ್ ನೈಟ್’, ರಾತ್ರಿ 10ಕ್ಕೆ ಮಹಾಪೂಜೆ ನಡೆಯಲಿದೆ.
ಸೆ.16 ಬುಧವಾರ ಪೂ.8ಕ್ಕೆ ಪೂಜೆ,ಮಧ್ಯಾಹ್ನ 12-30ಕ್ಕೆ
ಮಹಾಪೂಜೆ,ಅಪರಾಹ್ನ1ರಿಂದ ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ. ಸಂಜೆ 5ರಿಂದ ಗಣೇಶ ವಿಗ್ರಹ ವಿಸರ್ಜನಾ ಶೋಭಾ ಯಾತ್ರೆ ನಡೆಯಲಿದೆ. ಶೋಭಾಯಾತ್ರೆಗೆ ಸಿಡಿಮದ್ದು ಪ್ರದರ್ಶನ, ನಾಸಿಕ್ ಬ್ಯಾಂಡ್ ಮೆರುಗು ನೀಡಲಿದೆ ಎಂದು ಹಳೆಗೇಟು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.









