ಗುತ್ತಿಗಾರು:ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಫೆ.23 ರಂದು ಚುನಾವಣೆ ನಡೆಯಲಿದೆ. ‘ರೈತ ಸಹಕಾರ ಭಾರತ’ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿಯೂ ಸ್ಪರ್ಧಿಸುತ್ತಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ರೈತ ಸಹಕಾರ ಭಾರತ ತಂಡದಿಂದ

ಸನತ್ ಮುಳುಗಾಡು, ಪ್ರವೀಣ್ ಮುಂಡೋಡಿ, ಸುಧಾಕರ ಮಲ್ಕಜೆ, ಜಯಾನಂದ ಪಟ್ಟಿ, ಗಿರೀಶ್ ಪಡ್ಡಂಬೈಲು, ದಿನೇಶ್ ಹಾಲೆಮಜಲು ಸ್ಪರ್ಧಿಸುತ್ತಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಕರುಣಾಕರ ಹೊಸಹಳ್ಳಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಮಧುಕಿರಣ ಪೂಜಾರಿಕೋಡಿ. ಮಹಿಳಾ ಕ್ಷೇತ್ರದಿಂದ ಶಶಿಕಲಾ ದೇರಪಜ್ಜನಮನೆ, ರತ್ನಾವತಿ ಹುಲ್ಲುಕುಮೇರಿ ಸ್ಪರ್ಧಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪುರುಷೋತ್ತಮ ಅಡ್ಡನಪಾರೆ,ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಾಲಪ್ಪ ಬಳ್ಳಕ ಸ್ಪರ್ಧಿಸುತ್ತಿದ್ದಾರೆ.