ದೇವಚಳ್ಳ: ಅಧ್ಯಕ್ಷತೆಗೆ ಸಲ್ಲಿಸಲಾಗಿದ್ದ ನಾಮಪತ್ರ ಹಿಂಪಡೆದ ಕಾರಣ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷತೆ ಆಯ್ಕೆಯನ್ನು ಆ.11ಕ್ಕೆ ಮುಂದೂಡಲಾಗಿದೆ. ಉಪಾಧ್ಯರ ಆಯ್ಕೆ ನಡೆಸಲಾಗಿದೆ. ದೇವಚಳ್ಳ ಗ್ರಾ.ಪಂ.ಚುನಾವಣೆ ಆ.9 ರಂದು ನಿಗದಿಯಾಗಿತ್ತು. ಅಧ್ಯಕ್ಷತೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಸುಲೋಚನ ದೇವ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷತೆಗೆ
ಲೀಲಾವತಿ ಡಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದಂತೆ ಸುಲೋಚನ ದೇವ ನಾಮಪತ್ರ ವಾಪಾಸ್ ಪಡೆದಿದರು. ಈ ನಾಟಕೀಯ ಬೆಳವಣಿಗೆಯಿಂದಾಗಿ ಉಪಾಧ್ಯಕ್ಷರ ಆಯ್ಕೆ ಮಾತ್ರ ಅವಿರೋಧವಾಗಿ ನಡೆದಿದ್ದು, ಅಧ್ಯಕ್ಷರ ಆಯ್ಕೆ ಆ.11ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅರಬಣ್ಣ ಪೂಜೇರಿ ತಿಳಿಸಿದ್ದಾರೆ. ದೇವಚಳ್ಳದಲ್ಲಿ ಬಣ ರಾಜಕೀಯ ಮತ್ತೆ ಗರಿಗೆದರಿ ಕೆಲ ಸದಸ್ಯರಲ್ಲಿ ಗೊಂದಲ ಉಂಟಾಗಿ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪ ಆಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುಲೋಚನ ದೇವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಡಿ. ನಾಮಪತ್ರ ಸಲ್ಲಿಸಿದ್ದರು. ಕೊನೆಯಲ್ಲಿ ಹೊಂದಾಣಿಕೆ ಕಾರಣ ನಾಮಪತ್ರ ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.