ಸಂಪಾಜೆಃ: ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ ಮಂದಿಸಿದರು.ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳಾದ
ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಹಾಗೂ ಲೆಕ್ಕ ಪರಿಶೋದನ ಸಮಿತಿ, ಸಾಮಾಜಿಕ ನ್ಯಾಯ ಸಮಿತಿಗಳಿಗೆ ಸದಸ್ಯರುಗಳನ್ನು ನೇಮಕ ಮಾಡಲಾಯಿತು. ಗ್ರಂಥಾಲಯ ಮೇಲ್ವಿಚಾರಣ ಸಮಿತಿ ರಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿ ಕಟ್ಟಿ ಹಾಕದೆ ಸಾಕುವವರ ಬಗ್ಗೆ ಚರ್ಚೆ ನಡೆದು ಸಾಕುಪ್ರಾಣಿಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಬಿಟ್ಟರೆ ಮಾಲೀಕರಿಗೆ 2 ಸಾವಿರ ದಂಡನೆ ಹಾಕಲು ತೀರ್ಮಾನಿಸಲಾಯಿತು. ಕಡೆಪಾಲ, ಕೈಪಡ್ಕ ದನ,ಆಡು ಗಳನ್ನು ರಸ್ತೆಯಲ್ಲಿ ಬಿಡುತ್ತಿರುವ ಬಗ್ಗೆ ವ್ಯಾಪಕ ದೂರು ಬರುತಿದ್ದು ಸಾಕು ಪ್ರಾಣಿಗಳನ್ನು ಬಿಡುವವರ ವಿವರಣೆ ಪಡೆದು ದಂಡನೆ ಹಾಕುವುದು, ಕಡೆಪಾಲ ಮುಳ್ಳುಕುಂಜ ನಿವೇಶನ ಮಂಜೂರು ಅದವರ ಸಭೆ ಕರೆಯಲು
ತೀರ್ಮಾನಿಸಲಾಯಿತು. ಪೇಟೆಯಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ವರ್ತಕರು ಹಾಗೂ ವಾಹನ ಚಾಲಕರ ಹಾಗೂ ಪೊಲೀಸ್, ಕಂದಾಯ ಇಲಾಖೆಯ ಸಭೆ ಕರೆಯಲು ತೀರ್ಮಾನಿಸಲಾಯಿತು. ಸ್ವಚ್ಛತೆಯ ಸಂಪೂರ್ಣ ಉಸ್ತುವಾರಿ ನವಂಬರ್ ತಿಂಗಳಿಂದ ಸಂಜೀವಿನಿ ಒಕ್ಕೂಟಕ್ಕೆ ನೀಡುವುದು ಹಾಗೂ ಅಂಗಡಿಗಳಿಗೆ ಪ್ಲಾಸ್ಟಿಕ್ ಚೀಲ ಬಕೇಟ್ ನೀಡಿ ಹಸಿ ಹಾಗೂ ಒಣ ಕಸ ಸಂಗ್ರಹಿಸಲು ಹಾಗೂ ಸಂಗ್ರಹಿಸಿ ಎಂ. ಆರ್. ಎಫ್ ಘಟಕಕ್ಕೆ ನೀಡಲು ತೀರ್ಮಾನಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ದೃಷ್ಠಿ ಯಿಂದ. ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಗದಂತೆ ರಸ್ತೆಯ 2 ಬದಿಗಳಲ್ಲಿ ಫೂಟ್ ಬಾತ್ ಮೇಲೆ ಇರುವ ಬೋರ್ಡ್ ಇನಿತ್ತರ ಒತ್ತುವರಿ ತೆರವು ಗೊಳಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಅಬೂಸಾಲಿ, ಶೌವಾದ್ ಗೂನಡ್ಕ, ವಿಜಯ ಕುಮಾರ್, ವಿಮಲಾ ಪ್ರಸಾದ್, ರಜನಿ ಶರತ್, ಸುಶೀಲ, ಅನುಪಮಾ ಉಪಸ್ಥಿತರಿದ್ದರು.