ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಲೆಕ್ಕ ಪತ್ರ ಮಂಡಿಸಿದರು. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಸಾರ್ವಜನಿಕರಿಂದ ಬಂದ ಅರ್ಜಿ ಸಭೆಯಲ್ಲಿ ಓದಿ ತಿಳಿಸಿದರು. ಕುಡಿಯುವ ನೀರು
ಸಮರ್ಪಕವಾಗಿ ಬಳಕೆ ನೀರು ಪೋಲು ಮಾಡುವವರ ನಳ್ಳಿ ಸಂಪರ್ಕ ಕಡಿತ. ತುರ್ತು ಬೋರ್ವೆಲ್ ರಿಪೇರಿ. ಕುಡಿಯುವ ನೀರಿನ ಪಂಪ್ ಗಳಿಗೆ ಸೋಲಾರ್ ಅಳವಡಿಸಲು ಸರಕಾರಕ್ಕೆ ಪತ್ರ, ಅಂಗನವಾಡಿ ಗಳಿಗೆ ಸಕಾಲದಲ್ಲಿ ಆಹಾರ ತಲುಪದ ಬಗ್ಗೆ ಇಲಾಖೆಯ ಗಮನಕ್ಕೆ ತರಲು ನಿರ್ಣಯ ಮಾಡಲಾಯಿತು. ಗೂನಡ್ಕ ಶಾರದಾ ಶಾಲೆಯ ಮತದಾನ ಕೇಂದ್ರ ಹೊಸ ಕಟ್ಟಡಕ್ಕೆ ಬದಲಾವಣೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್ ಸದಸ್ಯರುಗಳಾದ ಸೋಮಶೇಖರ ಕೊಯಿಂಗಾಜೆ, ಅಬೂಸಾಲಿ, ಶೌವಾದ್ ಗೂನಡ್ಕ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಅನುಪಮಾ, ಲಿಸ್ಸಿ ಮೊನಾಲಿಸಾ, ಸುಶೀಲ, ಜಗದೀಶ್ ರೈ, ವಿಜಯ ಕುಮಾರ್ ಉಪಸ್ಥಿತರಿದ್ದರು