ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಹಾಗೂ ಉಪಾಧ್ಯಕ್ಷರಾಗಿ ಎಸ್.ಕೆ.ಮಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ. ಮುಂದಿನ ಎರಡೂವರೆ ವರ್ಷದ ಎರಡನೇ ಅವಧಿಯ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವರು ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು
ಎಸ್.ಕೆ.ಮಹಮ್ಮದ್ ಹನೀಫ ಆಯ್ಕೆಯಾದರು.
ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇರುವ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ವಿಮಲ ಪ್ರಸಾದ್ ನಾಮಪತ್ರ ಹಿಂಪಡೆದರು. ಈ ಹಿನ್ನಲೆಯಲ್ಲಿ ಸುಮತಿ ಶಕ್ತಿವೇಲು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಕೆ.ಅಬೂಸಾಲಿ ಹಾಗೂ ಎಸ್.ಕೆ.ಹನೀಫ ಅವರು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆ ನಡೆಯಿತು. ಎಲ್ಲಾ 14 ಮಂದಿ ಸದಸ್ಯರು ಮತದಾನ ಮಾಡಿದರು. ಎಸ್.ಕೆ.ಹನೀಫ್ ಅವರು 9 ಮತ ಪಡೆದು ಆಯ್ಕೆಯಾದರೆ ಅಬೂಸಾಲಿ ಅವರಿಗೆ 5 ಮತಗಳು ದೊರೆಯಿತು. ಸೂಫಿ ಪೆರಾಜೆ ಚುನಾವಣಾಧಿಕಾರಿಯಾಗಿದ್ದರು.