ಸುಳ್ಯ: ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಉಬರಡ್ಕ ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಮಿತಿಯ ಸಭೆಯಲ್ಲಿ
ರಾಜ್ಯ ಸಮಿತಿಯನ್ನು ಹಾಗೂ ಒಕ್ಕೂಟದ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿತು. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಹರೀಶ್ ಉಬರಡ್ಕ ಅವರನ್ನು ರಾಜ್ಯಾಧ್ಯಕ್ಷರು ನೇಮಕಗೊಳಿಸಿದ್ದರು. ಸುಳ್ಯ ತಾಲೂಕಿನ ಉಬರಡ್ಕ ಗ್ರಾಮ ಪಂಚಾಯತ್ನಲ್ಲಿ 4 ಬಾರಿ ಸದಸ್ಯರಾಗಿರುವ ಹರೀಶ್ ಉಬರಡ್ಕ ಗ್ರಾ.ಪಂ.ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.