ಸುಳ್ಯ: ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ , ಅಂಗನವಾಡಿಯ ನೂತನ ಕೊಠಡಿ ಉದ್ಘಾಟನೆ ಹಾಗೂ ಮಕ್ಕಳ ದಿನಾಚರಣೆಯನ್ನು ನೆರವೇರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಿಡಿಪಿಒ ಶೈಲಜಾ ದಿನೇಶ್ ಕುಕ್ಕುಜಡ್ಕ ವಹಿಸಿದ್ದರು.1.5 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಉದ್ಘಾಟಿಸಿ ಮಾತನಾಡಿ, ನೂತನ ಕೊಠಡಿಗೆ
ಇಲಾಖೆ ವತಿಯಿಂದ, ಒಂದು ಲಕ್ಷ ಅನುದಾನ ಬಂದಿದ್ದು, ಎಸ್ಟಿಮೇಟ್ಗಿಂತ ಅಧಿಕ ವಿಸ್ತೀರ್ಣ ನಿರ್ಮಾಣ ಮಾಡಿರುತ್ತೇವೆ. ಈ ನೂತನ ಕೊಠಡಿಗೆ ಹೆಚ್ಚುವರಿಯಾಗಿ ಸುಮಾರು ಐವತ್ತು ಸಾವಿರದಷ್ಟು ಅಧಿಕ ಖರ್ಚು ಆಗಿದ್ದು ನಾನು, ಸ್ವತಃ ಹಾಕಿ ಪೂರ್ತಿಗೊಳಿಸಿರುತ್ತೇನೆ ಎಂದು ಹೇಳಿದರು. ಸಮಾರಂಭದಲ್ಲಿ ಸಿಡಿಪಿಒ ಶೈಲಜಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆ.ಕೆ.ರೈ, ಕೆ.ಎಂ.ಮುಸ್ತಫ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಶುಭಶ್ರೀ ಮಹಿಳಾ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಂಗನವಾಡಿ ಅಧ್ಯಾಪಕರು ಪುಟಾಣಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.