ಸುಳ್ಯ:ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ಸಂಪಾಜೆ ದಫ್ ಸ್ಪರ್ಧೆ ಇಂದು
(ಜ.5ರಂದು) ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಲಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ 14 ಕ್ಕತ ಹೆಚ್ಚು ತಂಡಗಳು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸ್ಥಳೀಯ 6ಕ್ಕೂ ತಂಡಗಳು ಹೆಸರು ಭಾಗವಹಿಸಲಿದರ. ಸಂಜೆ 4 ಗಂಟೆಗೆ ಗೂನಡ್ಕ ಪೇಟೆಯಲ್ಲಿ ಆಕರ್ಷಕ ದಫ್ ತಂಡಗಳ ಮೆರವಣಿಗೆ ನಡೆಯಲಿದೆ.ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಇರಲಿದೆ ಎಂದು ಹೇಳಿದರು. ಸಂಜೆ 6 ಗಂಟೆಯ ಬಳಿಕ ತಾಲೂಕು ಮಟ್ಟದ ಸ್ಪರ್ಧೆ ಹಾಗೂ 8 ಗಂಟೆಯ ಬಳಿಕ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ.