ಸುಳ್ಯ: ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಶುದ್ದೀಕೃತ,ಶೀತಲೀಕೃತ ಸಾರ್ವಜನಿಕ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಗಾಂಧಿನಗರ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುವಾ ನೆರವೇರಿಸಿದರು.ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ದಾನಿಗಳ
ಸಹಕಾರ ದಿಂದ ಕೊಡುಗೆಯಾಗಿ ನೀಡಿದ ಘಟಕದ ದಾಖಲೆ ಪತ್ರಗಳನ್ನು ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ಜಮಾ ಅತ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ಅವರಿಗೆ ಹಸ್ತಾoತರ ಮಾಡಿದರು
ಎಂಜೆಎಂ ಮಾಜಿ ಅಧ್ಯಕ್ಷರು ಗಳಾದ ಹಾಜಿ ಕೆ. ಬಿ. ಮಹಮ್ಮದ್, ಆದಂ ಹಾಜಿ ಕಮ್ಮಾಡಿ ಲೋಕಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಜಮಾಅತ್ ಸಮಿತಿ ಪದಾಧಿಕಾರಿಗಳಾದ ಹಾಜಿ ಮಹಮ್ಮದ್ ಕೆಎಂಎಸ್, ಕೆ. ಬಿ. ಕೋಶಾಧಿಕಾರಿ ಮುಹಿಯದ್ದೀನ್ ಫ್ಯಾನ್ಸಿ ಕೆ. ಬಿ.ಅಬ್ದುಲ್ ಮಜೀದ್, ಹಮೀದ್ ಬೀಜಕೊಚ್ಚಿ, ಹಮೀದ್ ಹಾಜಿ ಬಿಳಿಯಾರು, ಇಬ್ರಾಹಿಂ ಶಿಲ್ಪಾ,ಅನ್ಸಾರ್ ನಿರ್ದೇಶಕರು ಗಳಾದ ಎಸ್. ಪಿ. ಅಬೂಬಕ್ಕರ್, ಕೆ. ಬಿ. ಸಂಶುದ್ದೀನ್, ಕೆ. ಬಿ. ಇಬ್ರಾಹಿಂ, ಖಾದರ್ ಎಂ. ಟಿ. ಸಿದ್ದೀಕ್ ಕಟ್ಟೆಕ್ಕಾರ್ಸ್, ಶಹೀದ್ ಪಾರೆ ಎಂ. ಐ. ಮದ್ರಸ ಮುಖ್ಯ ಶಿಕ್ಷಕರಾದ ಸಿರಾಜುದ್ದೀನ್ ಸಖಾಫಿ, ಉದ್ಯಮಿಗಳಾದ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್, ಹಮೀದ್ ಕುತ್ತಮೊಟ್ಟೆ, ರಝಕ್ ಹಾಜಿ ರಾಜಧಾನಿ ಮೊದಲಾದವರು ಉಪಸ್ಥಿತರಿದ್ದರು.